alex Certify ಪ್ರೀತಿಸಿ ಮದುವೆಯಾಗಿ 3 ತಿಂಗಳು ಕಳೆದಿಲ್ಲ, ಆಗ್ಲೇ ನಡೀತು..!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾಗಿ 3 ತಿಂಗಳು ಕಳೆದಿಲ್ಲ, ಆಗ್ಲೇ ನಡೀತು..!?

हैवानियत की हद पार, पति ने पहले कुत्ते की जंजीर से घोंटा गला, फिर चाकू से गोदा

ಏಳು ಜನ್ಮ ಒಟ್ಟಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಪತಿಯೇ ಜೀವನ ಸಂಗಾತಿ ಜೀವ ತೆಗೆದಿದ್ದಾನೆ. ಅಮಾನುಷವಾಗಿ ಪತ್ನಿ ಜೀವ ತೆಗೆದ ಪತಿ ನಂತ್ರ ಪೊಲೀಸ್ ಮುಂದೆ ಶರಣಾಗಿದ್ದಾನೆ. ಇಬ್ಬರ ಮದುವೆಯಾಗಿ ಕೇವಲ 3 ತಿಂಗಳಾಗಿತ್ತಂತೆ.

ಘಟನೆ ಇಂಧೋರ್ ನಲ್ಲಿ ನಡೆದಿದೆ. ಇಬ್ಬರು ಒಂದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ದರಂತೆ. ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಆದ್ರೆ ಮದುವೆಗೆ ಹುಡುಗಿ ಮನೆಯವರು ಒಪ್ಪಿರಲಿಲ್ಲ. ಆರೋಪಿ ಹರ್ಷ್ ಒಳ್ಳೆಯವನಲ್ಲವೆಂದು ಕುಟುಂಬಸ್ಥರು ಹೇಳಿದ್ದರಂತೆ. ಆದ್ರೆ ಇದನ್ನು ಕೇಳದ ಹುಡುಗಿ ಹರ್ಷ್ ಮನೆಯಲ್ಲಿ ವಾಸ ಶುರು ಮಾಡಿದ್ದಳು.

ಮೂರು ತಿಂಗಳ ಹಿಂದೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಕೋಪಗೊಂಡ ಹರ್ಷ್, ನಾಯಿ ಸರಪಳಿಯಿಂದ ಪತ್ನಿ ಕತ್ತು ಬಿಗಿದಿದ್ದಾನೆ. ನಂತ್ರ ಚಾಕುವಿನಿಂದ ಇರಿದಿದ್ದಾನೆ. ಅಲ್ಲಿಯೇ ಪತ್ನಿ ಕೊನೆಯುಸಿರೆಳೆದಿದ್ದಾಳೆ. ನಂತ್ರ ಪೊಲೀಸರಿಗೆ ಕರೆ ಮಾಡಿದ ಹರ್ಷ್, ವಿಷ್ಯ ತಿಳಿಸಿ ಶರಣಾಗಿದ್ದಾನೆ. ಪ್ರೀತಿಸಿ ಮದುವೆಯಾದ ಜೋಡಿ ಮಧ್ಯೆ ಹತ್ಯೆ ಮಾಡುವಂತಹ ಗಲಾಟೆ ಏನಾಗಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...