ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಂದ್ ಆಗಿದ್ದ ಮದ್ಯ ಮಾರಾಟ ಪುನಃ ಮಂಗಳವಾರದಿಂದ ಆರಂಭವಾಗಲಿದ್ದು, ಮದ್ಯಪ್ರಿಯರು ತಮ್ಮ ನೆಚ್ಚಿನ ಬ್ರಾಂಡ್ ಪಡೆಯಲು ಮದ್ಯದಂಗಡಿ ಮುಂದೆ ನಿಲ್ಲಲು ಸಜ್ಜಾಗಿದ್ದಾರೆ.
ತಮಿಳುನಾಡಿನಲ್ಲಿ ವಿವಿಧ ಭಾಗದಲ್ಲಿ ಆರಂಭವಾಗಿದ್ದರೂ, ಮದ್ಯ ಮಾರಾಟಕ್ಕೆ ಚೆನ್ನೈ ನಲ್ಲಿ ಅವಕಾಶ ನೀಡಿರಲಿಲ್ಲ. ಇದೀಗ ಮಂಗಳವಾರದಿಂದ ಇಲ್ಲಿಯೂ ಅವಕಾಶ ನೀಡಲಾಗಿದೆ.
ಸರಕಾರಿ ಸ್ವಾಮ್ಯದ ಮದ್ಯದಂಗಡಿಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ನಿತ್ಯ ಬೆ.10 ಸಂ.7ವರೆಗೆ ಅವಕಾಶ ನೀಡಲಾಗಿದೆ. ಆದರೆ ಅಂಗಡಿಯೊಂದರಲ್ಲಿ 500 ಟೋಕನ್ ನೀಡಲಾಗಿದ್ದು, ಅವರಿಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಸರಕಾರ ತಿಳಿಸಿದೆ.