ನವದೆಹಲಿ: ಕೊರೊನಾ ಸೋಂಕು ತಡೆಯಲು ಲಾಕ್ಡೌನ್ ಜಾರಿ ಮಾಡಿದ ಕಾರಣ ಮಾರ್ಚ್ 23 ರಿಂದ ಬಂದ್ ಆಗಿದ್ದ ಹೋಟೆಲ್, ಧಾರ್ಮಿಕ ಕೇಂದ್ರ, ಮಾಲ್, ಕಚೇರಿ ಆರಂಭಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ಶಾಪಿಂಗ್ ಮಾಲ್, ಕಚೇರಿಗಳು, ಹೋಟೆಲ್, ಮತ್ತು ರೆಸ್ಟೋರೆಂಟ್, ಧಾರ್ಮಿಕ ಕೇಂದ್ರಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.
ದೇಗುಲಗಳಲ್ಲಿ ಪ್ರಸಾದ ವಿತರಣೆ, ಚಪ್ಪಲಿ ಹಾಕುವಂತಿಲ್ಲ. ಎಸಿ ತಾಪಮಾನ 24 ರಿಂದ 30 ಡಿಗ್ರಿ ಇರಬೇಕು. ಹೋಟೆಲ್ ಸಿಬ್ಬಂದಿಗೆ ಗ್ಲೌಸ್ ಬಳಕೆ, ಪಾರ್ಸೆಲ್ ಗೆ ಪ್ರತ್ಯೇಕ ಕೌಂಟರ್ ತೆರೆಯಬೇಕು. ಲಿಫ್ಟ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂಬುದು ಸೇರಿದಂತೆ ವಿವಿಧ ಸೂಚನೆಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಗುರುವಾರ ರಾತ್ರಿ ಬಿಡುಗಡೆ ಮಾಡಿದೆ.