alex Certify ದಸರಾ ಹೊತ್ತಲ್ಲೇ ದುರಂತದ ಲವ್ ಸ್ಟೋರಿ: ಪ್ರಿಯತಮೆಯ ಸಮಾಧಿ ಬಳಿ ಪ್ರಿಯಕರನಿಂದ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಸರಾ ಹೊತ್ತಲ್ಲೇ ದುರಂತದ ಲವ್ ಸ್ಟೋರಿ: ಪ್ರಿಯತಮೆಯ ಸಮಾಧಿ ಬಳಿ ಪ್ರಿಯಕರನಿಂದ ದುಡುಕಿನ ನಿರ್ಧಾರ

ಹೈದರಾಬಾದ್: ಪ್ರಿಯತಮೆಯ ಸಮಾಧಿ ಬಳಿಯಲ್ಲೇ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಜಯಶಂಖರ್ ಭೂಪಾಲಪಲ್ಲಿ ಜಿಲ್ಲೆಯ ಮಹದೇವಪುರ ಮಂಡಲದ ಕುದುರುಪಲ್ಲಿಯಲ್ಲಿ ನಡೆದಿದೆ.

24 ವರ್ಷದ ಚೆಲ್ಲಾ ಮಹೇಶ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಪ್ರೀತಿಸುತ್ತಿದ್ದ ಹುಡುಗಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಸಮಾಧಿ ಬಳಿ ಆಗಮಿಸಿದ ಮಹೇಶ್ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ.

ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಆಕೆಯ ನಿಧನದ ಬಳಿಕ ಮಹೇಶ್ ಆಘಾತಕ್ಕೆ ಒಳಗಾಗಿದ್ದ. ಪ್ರೀತಿಸಿದ ಹುಡುಗಿ ಇಲ್ಲದೆ ಬದುಕಲು ಸಾಧ್ಯವಿಲ್ಲವೆಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ದಸರಾ ಸಂಭ್ರಮದಲ್ಲಿದ್ದ ಕುಟುಂಬದವರು ಮತ್ತು ಗ್ರಾಮದ ಜನತೆಗೆ ಕತ್ತಲೆ ಕವಿಯುವಂತೆ ಮಾಡಿದೆ. ಪ್ರಿಯತಮೆ ನಿಧನದ ಬಳಿಕ ಮಹೇಶ್ ಆಘಾತಕ್ಕೆ ಒಳಗಾಗಿದ್ದ. ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...