ದೇಶದಲ್ಲಿ ಕೊರೊನಾ ವೈರಸ್ ಮಾರಣಾಂತಿಕವಾಗಿ ಕಾಡುತ್ತಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಈ ಹಿನ್ನಲೆಯಲ್ಲಿ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಇದೀಗ 5ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಪರೀಕ್ಷೆ ನಡೆಸುವ ಕುರಿತಂತೆ ಸೇರಿ ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ತೆಲಂಗಾಣ ಸರ್ಕಾರ ಬಾಕಿ ಉಳಿದಿದ್ದ ಎಸ್.ಎಸ್.ಸಿ. ಪರೀಕ್ಷೆ ನಡೆಸುವ ಕುರಿತಂತೆ ದಿನಾಂಕ ಘೋಷಿಸಿದ್ದು, ಈ ಪರೀಕ್ಷೆಗಳು ಜೂನ್ 8 ರಿಂದ ಜುಲೈ 5 ರ ವರೆಗೆ ನಡೆಯಬೇಕಾಗಿತ್ತು.
ಆದರೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಎಸ್.ಎಸ್.ಸಿ. ಪರೀಕ್ಷೆಯನ್ನು ರದ್ದುಗೊಳಿಸಿರುವ ತೆಲಂಗಾಣ ಸರ್ಕಾರ, ವಿದ್ಯಾರ್ಥಿಗಳು ಪಡೆದಿರುವ ಇಂಟರ್ನಲ್ ಮಾರ್ಕ್ಸ್ ಆಧಾರದ ಮೇಲೆ ಉತ್ತೀರ್ಣ ಮಾಡಲು ಸೂಚನೆ ನೀಡಿದೆ.