ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮಿತಿಮೀರಿದೆ. ರಾಜ್ಯ ಸರ್ಕಾರಗಳು ಫೇಸ್ ಮಾಸ್ಕ್ ಬಳಕೆ ಸೇರಿದಂತೆ ವಿವಿಧ ಕ್ರಮಗಳನ್ನ ಜಾರಿಗೆ ತರುವ ಮೂಲಕ ಡೆಡ್ಲಿ ವೈರಸ್ ವಿರುದ್ಧ ಹೋರಾಡುತ್ತಿವೆ,
ತೆಲಂಗಾಣ ಸರ್ಕಾರ ಕೂಡ ಸಾರ್ವಜನಿಕರಿಗೆ ಮಾಸ್ಕ್ ಬಳಕೆಯನ್ನ ಕಡ್ಡಾಯ ಮಾಡಿದೆ. ಅಲ್ಲದೇ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ 1 ಸಾವಿರ ರೂಪಾಯಿ ದಂಡವನ್ನೂ ವಿಧಿಸುತ್ತಿದೆ.
ಆದರೆ ತೆಲಂಗಾಣದ ಗ್ರಾಮವೊಂದರ ನಿವಾಸಿಯಾಗಿರುವ ಕುರಿಗಾಹಿಯೊಬ್ಬರಿಗೆ ಫೇಸ್ ಮಾಸ್ಕ್ ಕೊಳ್ಳಲು ಕೈಯಲ್ಲಿ ಹಣವಿಲ್ಲದೇ ಪರದಾಡಿದ್ದು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೆಹಬೂಬಾನಗರ ಜಿಲ್ಲೆಯ ಚಿನ್ನಮುನುಗಲ್ ಚಡ್ನ ನಿವಾಸಿಯಾಗಿರುವ ಮೇಕಲಾ ಕರ್ಮಯ್ಯಾ ಎಂಬವರು ತಮ್ಮ ಪಿಂಚಣಿ ಹಣವನ್ನ ಸಂಗ್ರಹ ಮಾಡೋಕೆ ಮಂಡಲ್ ಆಫೀಸಿಗೆ ಭೇಟಿ ನೀಡಿದ್ದರು.
ಸರ್ಕಾರಿ ಕಚೇರಿಗಳಿಗೆ ಮಾಸ್ಕ್ ಇಲ್ಲದೇ ಪ್ರವೇಶವಿಲ್ಲ ಎಂಬ ವಿಚಾರವನ್ನ ಅರಿತ ಮಾಸ್ಕ್ ಬದಲಿಗೆ ಮುಖಕ್ಕೆ ಹಕ್ಕಿಯ ಗೂಡನ್ನ ಹಾಕಿಕೊಂಡು ಬರುವ ಮೂಲಕ ಸುದ್ದಿಯಾಗಿದ್ದಾರೆ.
ವೈದ್ಯಕೀಯ ತಜ್ಞರು ಕೊರೊನಾ ವೈರಸ್ ವಿರುದ್ಧ ಫೇಸ್ ಮಾಸ್ಕ್ಗಳ ಬಳಕೆ ತುಂಬಾನೇ ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಿಶ್ವದ ಬಹುತೇಕ ಎಲ್ಲಾ ಕಡೆ ಫೇಸ್ ಮಾಸ್ಕ್ಗಳನ್ನ ಜನರಿಗೆ ಕಡ್ಡಾಯಗೊಳಿಸಲಾಗಿದೆ.