ಖಾಸಗಿ ಶಾಲಾ ಶಿಕ್ಷಕರಿಗೆ ತೆಲಂಗಾಣ ಸರ್ಕಾರದಿಂದ ಭರ್ಜರಿ ʼಗುಡ್ ನ್ಯೂಸ್ʼ 10-04-2021 1:34PM IST / No Comments / Posted In: Latest News, India ರಾಜ್ಯದಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸರ್ಕಾರದ ವತಿಯಿಂದ 2 ಸಾವಿರ ರೂಪಾಯಿ ಸಹಾಯ ಧನ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ 25 ಕೆಜಿ ಅಕ್ಕಿಯನ್ನ ಉಚಿತವಾಗಿ ಪ್ರತಿ ತಿಂಗಳು ನೀಡೋದಾಗಿ ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. ಶಾಲೆಗಳು ಪುನಾರಂಭವಾಗುವರೆಗೂ ಏಪ್ರಿಲ್ ತಿಂಗಳಿನಿಂದ ಈ ಸೌಲಭ್ಯ ಸಿಗಲಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಈ ವಿಚಾರವಾಗಿ ಮಾತನಾಡಿ ಕೊರೊನಾದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಗಿಲು ಹಾಕಿವೆ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ನೆರವಾಗಲಿ ಎಂಬ ಕಾರಣಕ್ಕೆ ಈ ತಿಂಗಳಿನಿಂದ ಶಾಲೆಗಳು ಪುನಾರಂಭವಾಗುವವರೆಗೂ 2000 ರೂ. ಸಹಾಯ ಧನ ಹಾಗೂ 25 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ ಎಂದು ಹೇಳಿದ್ದಾರೆ. ತೆಲಂಗಾಣ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸರಿ ಸುಮಾರು 50 ಲಕ್ಷ ಸಿಬ್ಬಂದಿಗೆ ಇದರಿಂದ ನೆರವಾಗಲಿದೆ ಎಂದು ತೆಲಂಗಾಣ ಸರ್ಕಾರ ಅಂದಾಜಿಸಿದೆ. ಈ ಯೋಜನೆಯ ಫಲಾನುಭವಿಯಾಗಲು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಬ್ಯಾಂಕ್ ಖಾತೆ ವಿವರ ಹಾಗೂ ಇತರೆ ಸೂಕ್ತ ಮಾಹಿತಿ ನೀಡಬೇಕು ಸಿಎಂ ಹೇಳಿದ್ರು. CM Sri KCR has decided to provide Rs.2000 financial assistance and 25 Kg rice per month to teachers and other staff of recognized private educational institutions effective from April. This assistance to continue till educational institutions are reopened. pic.twitter.com/KzffyglcnV — Telangana CMO (@TelanganaCMO) April 9, 2021