ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಪೊದೆ ಮಧ್ಯೆ ಸಿಲುಕಿದ್ದ ಬೀದಿನಾಯಿ ರಕ್ಷಿಸಿ ತೆಲಂಗಾಣ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ನಾಗರಕರ್ನೂಲ್ ಠಾಣೆಯ ಸಿಬ್ಬಂದಿ ಮುಜೀಬ್ ಗಸ್ತು ತಿರುಗುತ್ತಿದ್ದಾಗ ಪೊದೆ ಮಧ್ಯೆ ಸಿಲುಕಿದ್ದ ನಾಯಿಯ ನರಳಾಟ ಕೇಳಿಸಿದೆ. ತಕ್ಷಣವೇ ಜೆಸಿಬಿಯನ್ನು ಸ್ಥಳಕ್ಕೆ ಕರೆತರಿಸಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಗಾಂಧಿ ನಾಯ್ಕ್ ಕೂಡ ಧಾವಿಸಿದ್ದು, ಜೆಸಿಬಿ ಸಹಾಯದಿಂದ ನೀರಿಗಿಳಿದ ಮುಜೀಬ್, ಪೊದೆಯಲ್ಲಿದ್ದ ನಾಯಿಯನ್ನು ಕಾಪಾಡುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯ ಮಾಹಿತಿ ನೀಡಿದ ನಾಯ್ಕ್, ಮಳೆಗಾಲದಲ್ಲಿ ಸಾಧಾರಣವಾಗಿ ಈ ಕಾಲುವೆ ತುಂಬಿ ಹರಿಯುತ್ತದೆ. ಅದಕ್ಕಾಗಿಯೇ ತುರ್ತು ಸಂದರ್ಭ ಎದುರಿಸಲು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಗಸ್ತಿನ ವೇಳೆ ಈ ಪ್ರಕರಣ ಗೊತ್ತಾಗಿ ಕಾರ್ಯಾಚರಣೆ ನಡೆಸಲಾಯಿತು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಾಹಸಮಯ ವಿಡಿಯೋ ವೈರಲ್ ಆಗಿದ್ದು, ಮುಜೀಬ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.