ಕೊರೋನಾ ಸೋಂಕಿನಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷವಂತೂ ಆನ್ ಲೈನ್ ತರಗತಿಯಲ್ಲೇ ದಿನ ದೂಡಲಾಗುತ್ತಿದೆ.
ಬಹುತೇಕ ಶಾಲೆಗಳು ಈ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಪಠ್ಯಕ್ರಮ ಪೂರ್ಣಗೊಳಿಸುವ ಸಲುವಾಗಿ ಆನ್ ಲೈನ್ ತರಗತಿಗಳನ್ನು ನಡೆಸುತ್ತಿವೆ.
ಪಟ್ಟಣ ಪ್ರದೇಶಗಳ ಕೆಲ ಮಕ್ಕಳಿಗೆ ಇದಕ್ಕೆ ಬೇಕಾದ ವ್ಯವಸ್ಥೆಗಳಿದ್ದು, ಇನ್ನೂ ಹಲವರಿಗೆ ಅಗತ್ಯ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್, ಇಂಟರ್ ನೆಟ್, ವಿದ್ಯುಚ್ಛಕ್ತಿ ಯಾವುದೂ ಇಲ್ಲದಂತಾಗಿದೆ. ಇದರಿಂದ ಆನ್ ಲೈನ್ ತರಗತಿ ಇಲ್ಲದೆ ಅನೇಕರು ಅವಕಾಶ ವಂಚಿತರಾಗುತ್ತಿದ್ದಾರೆ.
ಸಹಪಾಠಿಗಳ ಸಂಕಷ್ಟ ಅರಿತ 17 ವರ್ಷದ ಬಾಲಕ, ದಿಲ್ಲಿಯ ಎನ್ ಜಿ ಓ ಜೊತೆ ಸೇರಿ ತಾನೇ ಅವಕಾಶ ವಂಚಿತ ಮಕ್ಕಳಿಗೆ ಪಾಠ ಮಾಡಲು ಶುರು ಮಾಡಿದ್ದಾನೆ.
ಎನ್ ಜಿ ಓ ವನ್ನು ಒಳಗೊಂಡು ತರಗತಿ ನಡೆಸುತ್ತಿರುವುದರಿಂದ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳೆರಡೂ ನಡೆಯುತ್ತಿದ್ದು, ಗಣಿತ ಹಾಗೂ ವಿಜ್ಞಾನದ ಪಾಠ ಮಾಡುತ್ತಿದ್ದಾನೆ.