ಕೊರೋನಾ ಸಂಕಷ್ಟದ ನಡುವೆಯೂ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಚಹಾ ಮಾರಾಟಗಾರನೊಬ್ಬ ಮತದಾನದ ಮಹತ್ವ ಮತ್ತು ಕೊರೊನಾ ಕಾಟದ ಕುರಿತಂತೆ ವಿಭಿನ್ನ ರೀತಿಯಲ್ಲಿ ಜಾಗೃತಿ ಪ್ರಚಾರ ನಡೆಸುತ್ತಿದ್ದಾನೆ.
ಕೈಯಲ್ಲಿ ಚಹಾದ ಫ್ಲ್ಯಾಸ್ಕ್ ಹಿಡಿದು ಎಲ್ಲೆಡೆ ಸಂಚರಿಸುವ ಈತ ತನ್ನ ಅಂಗಿ, ಮಾಸ್ಕ್ ಮೇಲೆ ಒಂದಿಷ್ಟು ಸಂದೇಶಗಳನ್ನು ಬರೆದುಕೊಂಡಿದ್ದು, ಜನರೂ ಈತನ ವೇಷವನ್ನು ಕುತೂಹಲದಿಂದ ನಿಂತು ನೋಡುತ್ತಿದ್ದಾರೆ.
ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸುವುದು ಎಷ್ಟು ಮಹತ್ವದ ಸಂಗತಿಯೋ, ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಶುಚಿತ್ವ ಕಾಪಾಡುವುದೂ ಅಷ್ಟೇ ಮುಖ್ಯ ಎಂಬ ಸಂದೇಶ ರವಾನಿಸಿದ್ದಾನೆ.