alex Certify ಟಾಟಾ ಬಿಡುಗಡೆ ಮಾಡಿದೆ ಕೋವಿಡ್ -19 ಟೆಸ್ಟ್ ಕಿಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಬಿಡುಗಡೆ ಮಾಡಿದೆ ಕೋವಿಡ್ -19 ಟೆಸ್ಟ್ ಕಿಟ್

ಟಾಟಾ ಗ್ರೂಪ್ ನ ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ಈಗ ಕೋವಿಡ್-19 ಟೆಸ್ಟ್ ಕಿಟ್ ತಯಾರಿಸಲು ಮುಂದಾಗಿದೆ. ಕಂಪನಿಯು ಸೋಮವಾರದಿಂದ ಇದರ ತಯಾರಿ ಶುರು ಮಾಡಿದೆ. ಟಾಟಾದ ಈ ಕೋವಿಡ್ -19 ಪರೀಕ್ಷಾ ಕಿಟ್‌ಗಳು ಡಿಸೆಂಬರ್‌ನಿಂದ ದೇಶಾದ್ಯಂತದ ಪ್ರಯೋಗಾಲಯಗಳಲ್ಲಿ ಲಭ್ಯವಾಗಲಿವೆ.

ಸರ್ಕಾರದಿಂದ ಅನುಮೋದನೆ ಸಿಕ್ಕ ನಂತ್ರ ತಯಾರಿ ಶುರುವಾಗಿದೆ. ಕಿಟ್ 90 ನಿಮಿಷಗಳಲ್ಲಿ ಫಲಿತಾಂಶ ಸಿಗಲಿದೆ. ಈ ಕೋವಿಡ್ -19 ಪರೀಕ್ಷಾ ಕಿಟ್‌ಗಳನ್ನು ಚೆನ್ನೈನ ಟಾಟಾ ಸ್ಥಾವರದಲ್ಲಿ ಉತ್ಪಾದಿಸಲಾಗುವುದು.ಪ್ರತಿ ತಿಂಗಳು 1 ಮಿಲಿಯನ್ ಟೆಸ್ಟ್ ಕಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿಯೇ ಸ್ಥಳೀಯ ಕೋವಿಡ್ 19 ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಾಗ್ತಿದೆ. ಕಿಟ್ ಗೆ ಫೆಲುದಾ ಎಂದು ಹೆಸರಿಡಲಾಗಿದೆ. ಈ ಕಿಟ್ ಕೊರೊನಾ ವೈರಸ್ ಸೋಂಕನ್ನು ನಿಖರವಾಗಿ ಕಂಡು ಹಿಡಿಯಲು ನೆರವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...