ಅಡುಗೆ ಮಾಡುತ್ತಲೇ ವಿಶ್ವ ದಾಖಲೆ ಬರೆದ ಪುಟ್ಟ ಪೋರಿ..! 18-12-2020 6:29AM IST / No Comments / Posted In: Latest News, India, Recipies ಒಂದು ಸಾಂಪ್ರದಾಯಿಕ ಖಾದ್ಯ ತಯಾರು ಮಾಡಬೇಕು ಅಂದ್ರೆ ಅಬ್ಬಬ್ಬಾ ಅಂದ್ರೆ ನೀವು ಎಷ್ಟು ಸಮಯ ತೆಗೆದುಕೊಳ್ತೀರಾ..? ಕೇವಲ ಅರ್ಧ ಗಂಟೆಯಲ್ಲಿ 2 ಸಂಪೂರ್ಣ ವಿಭಿನ್ನವಾದ ಸಾಂಪ್ರದಾಯಿಕ ಖಾದ್ಯಗಳನ್ನ ತಯಾರಿಸೋಕೆ ನಿಮ್ಮಿಂದ ಸಾಧ್ಯಾನಾ..? ಒಂದು ಗಂಟೆ ಅವಧಿಯಲ್ಲಿ ನಾಲ್ಕು ಖಾದ್ಯಗಳನ್ನ ತಯಾರಿಸಬಲ್ಲೀರಾ..? ಇದೇನು ಅಡುಗೆ ಸ್ಪರ್ಧೆಯಲ್ಲಿ ಕೇಳುವ ಪ್ರಶ್ನೆ ಕೇಳ್ತಿದ್ದಾರೆ ಎಂದುಕೊಂಡ್ರಾ..? ಆದರೆ ಇಲ್ಲೊಬ್ಬ ಹುಡುಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಖಾದ್ಯ ತಯಾರಿಸುವ ಮೂಲಕ ವಿಶ್ವ ದಾಖಲೆಗೆ ಭಾಜನಳಾಗಿದ್ದಾಳೆ. ತಮಿಳುನಾಡಿನ ಶಾಲಾ ಬಾಲಕಿ ಸಿ.ಎನ್. ಲಕ್ಷ್ಮೀ ಸಾಯಿಶ್ರೀ ಚೆನ್ನೈನಲ್ಲಿ ಕೇವಲ 58 ನಿಮಿಷದ ಕಾಲಾವಕಾಶದಲ್ಲಿ ಬರೋಬ್ಬರಿ 46 ಖಾದ್ಯಗಳನ್ನ ತಯಾರಿಸುವ ಮೂಲಕ ವಿಶ್ವ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ. ಅಡುಗೆಯಲ್ಲಿ ಆಸಕ್ತಿ ಹೊಂದಿದ್ದ ಬಾಲಕಿ ಲಾಕ್ಡೌನ್ ಅವಧಿಯಲ್ಲಿ ತಾಯಿಯಿಂದ ಖಾದ್ಯ ಮಾಡೋದಕ್ಕೆ ತರಬೇತಿ ಪಡೆದಿದ್ದಳಂತೆ. ಇದೀಗ ಅತ್ಯಂತ ಕಡಿಮೆ ಅವಧಿಯಲ್ಲಿ ತಮಿಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನ ತಯಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾಳೆ. Tamil Nadu: A girl entered UNICO Book Of World Records by cooking 46 dishes in 58 minutes in Chennai yesterday. SN Lakshmi Sai Sri said, "I learnt cooking from my mother. I am very happy". pic.twitter.com/AmZ60HWvYX — ANI (@ANI) December 15, 2020