ಜಗತ್ತಿನ ಅತ್ಯಂತ ಹಗುರ ಉಪಗ್ರಹ ತಯಾರಿಸಿರುವ ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕ್ಯೂಬ್ಸ್ ಇನ್ ಸ್ಪೇಸ್ ಜಾಗತಿಕ ವಿನ್ಯಾಸ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ.
ಎಸ್ ರಿಯಾಸ್ದೀನ್ ಹೆಸರಿನ ಈ ಯುವ ಸಂಶೋಧಕ ತಂಜಾವೂರಿನವರಾಗಿದ್ದು ಸಸ್ತ್ರಾ ವಿವಿಯಲ್ಲಿ ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ಅಧ್ಯಯನ ನಡೆಸುತ್ತಿದ್ದಾರೆ.
37 ಮಿಮೀ ಗಾತ್ರದ ಫೆಮ್ಟೋ ಉಪಗ್ರಹಗಳಾದ ವಿಶನ್ ಸ್ಯಾಟ್ ವಿ1 ಹಾಗೂ ವಿ2 ತಯಾರಿಸಿದ್ದು, ಇವಕ್ಕೆ 33 ಗ್ರಾಂನಷ್ಟು ಪೇಲೋಡ್ ಅನ್ನು ಕಟ್ಟಿ ಉಡಾಯಿಸಲು ಯಶಸ್ವಿಯಾಗಿದ್ದಾರೆ. ಈ ಉಪಗ್ರಹವು ಜಗತ್ತಿನ ಅತ್ಯಂತ ಚಿಕ್ಕದಾದ ಫೆಮ್ಟೋ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೆರಿಕದ ನಾಸಾ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರಿಯಾಸ್ದೀನ್, ಪಾಲಿಯಿಥಮೈಡ್ ಥರ್ಮಾಪ್ಲಾಸ್ಟಿಕ್ ರೆಸಿನ್‌ಗಳ ಜೊತೆಗೆ 3ಡಿ ಪೇಂಟಿಂಗ್ ತಂತ್ರಜ್ಞಾನ ಬಳಸಿಕೊಂಡು ಈ ಅದ್ಭುತವನ್ನು ನಿರ್ಮಿಸಿದ್ದಾರೆ.