ಚೆನ್ನೈ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಈ ನಡುವೆ ಮದುವೆ ಸೀಜನ್ ಬೇರೆ ಶುರುವಾಗಿದೆ. ದುಬಾರಿ ದುನಿಯಾದಲ್ಲಿ ಈಗ ನವಜೋಡಿಗಳಿಗೆ ಮದುವೆಯಲ್ಲಿ ಉಡುಗೊರೆಯೇನು ಕೊಡಬೇಕು ಎಂಬುದೇ ಎಲ್ಲರ ಚಿಂತೆಯಾಗಿದೆ. ಇಲ್ಲೊಂದು ಸ್ನೇಹಿತರ ಗುಂಪು ನವ ದಂಪತಿಗಳಿಗೆ ಅಚ್ಚರಿ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ವಿವಾಹ ಸಮಾರಂಭಗಳಲ್ಲಿ ದುಬಾರಿ ಗಿಫ್ಟ್ ಗಳನ್ನು ನೀಡುವುದು ಪದ್ಧತಿಯಾಗಿದೆ. ಆದರೆ ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಗಿಫ್ಟ್ ನೀಡುವುದೆಂದರೆ ಅದೊಂದು ತಲೆನೋವಿನ ಸಂಗತಿಯೇ ಸರಿ. ಹೀಗಿರುವಾಗ ಚೆನ್ನೈನಲ್ಲಿ ಕಾರ್ತಿಕ್ ಹಾಗೂ ಶರಣ್ಯ ಜೋಡಿಯ ಅದ್ಧೂರಿ ವಿವಾಹ ಸಮಾರಂಭ ನಡೆದಿದ್ದು, ನವಜೋಡಿಗಳಿಗೆ ಸ್ನೇಹಿತರೆಲ್ಲ ಸೇರಿ ಎಲ್ ಪಿ ಜಿ ಸಿಲಿಂಡರ್, ಪೆಟ್ರೋಲ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪಂಚಮಸಾಲಿಗೆ ಮೀಸಲಾತಿಗೆ ಆಗ್ರಹ – ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮಧ್ಯಾಹ್ನ 2ಗಂಟೆಯ ಗಡುವು
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.