ಕೊರೊನಾ ಅಬ್ಬರದಿಂದ ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಆರೈಕೆ ಮಾಡುವುದು ಆಸ್ಪತ್ರೆಗಳಿಗೆ ಬಲೇ ದೊಡ್ಡ ಹೊರೆಯಾಗಿಬಿಟ್ಟಿದೆ. ಆರೋಗ್ಯ ಸೇವಾ ಕಾರ್ಯಕರ್ತರು ದಿನದ ಅಷ್ಟೂ ಅವಧಿಗೆ ವೈಯಕ್ತಿಯ ರಕ್ಷಣಾ ಸಲಕರಣೆ (PPE) ಧರಿಸಿಕೊಂಡು ಇರುವ ಕಿರಿಕಿರಿಯ ನಡುವೆಯೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವರಂತೆ ಕೆಲಸ ಮಾಡುತ್ತಲೇ ಇರಬೇಕು.
ಅಸ್ಸಾಂನ ಖಾನ್‌ಪಾರಾ ಕೋವಿಡ್ ಕೇಂದ್ರದಲ್ಲಿರುವ PPEಧಾರಿ ನರ್ಸ್ ಒಬ್ಬರು, 32 ಡಿಗ್ರಿ ತಾಪಮಾನದ ನಡುವೆ ವಿಪರೀತ ಕಾರ್ಯದೊತ್ತಡದ ನಡುವೆ ದಣಿದು ನೆಲಕ್ಕೊರಗಿರುವ ಚಿತ್ರವೊಂದು ವೈರಲ್ ಆಗಿದೆ.
ಅಸ್ಸಾಂ ಆರೋಗ್ಯ ಸಚಿವ ಹಿಮಾಂತಾ ಬಿಸ್ವಾ ಶರ್ಮಾ ಈ ಚಿತ್ರವನ್ನು ತಮ್ಮ ಟ್ವಿಟರ್ ಪ್ರೊಫೈಲ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಆರೋಗ್ಯ ಸೇವಾ ಕಾರ್ಯಕರ್ತರ ನಿಸ್ವಾರ್ಥ ಸೇವೆಗೆ ನೆಟ್ಟಿಗರು ಮನಬಿಚ್ಚಿ ಶ್ಲಾಘಿಸಿದ್ದಾರೆ.