
ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಈಗ ಮತ್ತೊಂದು ಕಿಡಿ ಹಚ್ಚಿದ್ದಾರೆ. ತಾಜ್ ಮಹಲ್ ಗೆ ರಾಮ್ ಮಹಲ್ ಎಂದು ಮರುನಾಮಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಲಿಯಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾಜ್ ಮಹಲ್ ಈ ಮೊದಲು ಶಿವನ ದೇವಾಲಯವಾಗಿತ್ತು. ಹೀಗಾಗಿ ಇದಕ್ಕೆ ರಾಮ್ ಮಹಲ್ ಎಂಬ ಹೆಸರಿಡಲಾಗುತ್ತದೆ ಎಂದು ಸುರೇಂದ್ರ ಸಿಂಗ್ ತಿಳಿಸಿದ್ದಾರೆ.
ಪೆಟ್ರೋಲ್ – ಡೀಸೆಲ್ ದರ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ‘ಬಿಗ್ ಶಾಕ್’
ಈ ಹಿಂದೆ ಸಮರ್ಥ ರಾಮದಾಸರು ಭಾರತವನ್ನು ಶಿವಾಜಿ ಮಹಾರಾಜರಿಗೆ ಒಪ್ಪಿಸಿದಂತೆ, ಗೋರಖನಾಥರು ಉತ್ತರಪ್ರದೇಶವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಒಪ್ಪಿಸಿದ್ದಾರೆ ಎಂದೂ ಸಹ ಸುರೇಂದ್ರ ಸಿಂಗ್ ಹೇಳಿದ್ದಾರೆ.