ತಾಜ್ ಮಹಲ್ ನಿಜಕ್ಕೂ ಒಂದು ಹಿಂದೂ ದೇಗುಲವಾಗಿತ್ತೇ ಎಂಬ ಕುರಿತಂತೆ ಸಾಕಷ್ಟು ಥಿಯರಿಗಳು ತೇಲಾಡುತ್ತಲೇ ಬಂದಿದ್ದು, ಈ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವೂ ಇದೆ. ಇದೀಗ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಈ ಕುರಿತಂತೆ ಇನ್ನೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
“ತಾಜ್ ಮಹಲ್ ಪುರಾತನ ಹಿಂದೂ ವೈದಿಕ ದೇವಸ್ಥಾನವಾಗಿದ್ದು, ತೇಜೋ ಮಹಾಲಯವಾಗಿತ್ತು ಎಂದು ಎಲ್ಲ ವೈಜ್ಞಾನಿಕ ಸಾಕ್ಷಿಗಳು ಪುಷ್ಟೀಕರಿಸುತ್ತಿವೆ. ತಾಜ್ ಮಹಲ್ ಅನ್ನು ಶಹಾಜಹಾನ್ ಕಟ್ಟಿಸಿದ್ದು ಎಂದು 300 ವರ್ಷಗಳಿಂದ ಇಡೀ ಜಗತ್ತಿಗೇ ಸುಳ್ಳು ಹೇಳಿಕೊಂಡು ಬರಲಾಗಿದೆ” ಎಂದು ಮಿಶ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅದ್ಧೂರಿಯಾಗಿ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮ ಹತ್ತಿರವಾಗುತ್ತಿರುವ ನಡುವೆಯೇ ಮಿಶ್ರಾರಿಂದ ಈ ಹೇಳಿಕೆ ಬಂದಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಮಿಶ್ರಾ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಇತಿಹಾಸ ತಜ್ಞ ದೇವದತ್ ಪಟ್ನಾಯಕ್, “ವೈದಿಕ ಲಿಪಿಗಳಲ್ಲಿ ದೇವಸ್ಥಾನಗಳ ಉಲ್ಲೇಖವಿಲ್ಲ. ಆರ್ಯ ಸಮಾಜ ಸ್ಥಾಪಕ ದಯಾನಂದ ಸರಸ್ವತಿ ಸಹ ದೇವಸ್ಥಾನಗಳ ಹಾಗೂ ಮೂರ್ತಿಗಳ ವಿರುದ್ಧವಿದ್ದರು” ಎಂದು ಮರುಟ್ವೀಟ್ ಮಾಡಿದ್ದಾರೆ.
https://twitter.com/devduttmyth/status/1286931708533592067?ref_src=twsrc%5Etfw%7Ctwcamp%5Etweetembed%7Ctwterm%5E1286931708533592067%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Ftaj-mahal-not-a-hindu-temple-but-kapil-mishra-isnt-the-first-to-mess-up-history-2734003.html
https://twitter.com/AtharvAthavale/status/1286937164794589184?ref_src=twsrc%5Etfw%7Ctwcamp%5Etweetembed%7Ctwterm%5E1286937164794589184%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Ftaj-mahal-not-a-hindu-temple-but-kapil-mishra-isnt-the-first-to-mess-up-history-2734003.html