ನವದೆಹಲಿ: ತೈಲಬೆಲೆ ಗಗನಕ್ಕೇರಿ ಈಗಾಗಲೇ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿರುವ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬಳಿಕ ಪೆಟ್ರೋಲ್-ಡೀಸೆಲ್ ದರ ಇನ್ನಷ್ಟು ಹೆಚ್ಚಿದ್ದು ರಾಮಾಯಣದ ಸಾದೃಶದ ಮೂಲಕ ಕೇಂದ್ರ ಸರ್ಕಾರದ ನಡೆ ವಿರುದ್ಧ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಚಾಟಿ ಬೀಸಿದ್ದಾರೆ.
ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂಪಾಯಿ. ಸೀತೆಯ ನೇಪಾಳದಲ್ಲಿ ಪೆಟ್ರೋಲ್ ಬೆಲೆ 53 ರೂಪಾಯಿ. ಆದರೆ ರಾವಣನ ಲಂಕೆಯಲ್ಲಿ ಪೆಟ್ರೋಲ್ ಬೆಲೆ ಕೇವಲ 51 ರೂ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಾಮ-ಸೀತೆಯರ ಜನ್ಮಭೂಮಿಗಿಂತ ರಾವಣನ ಲಂಕೆಯಲ್ಲಿಯೇ ಪೆಟ್ರೋಲ್ ದರ ಕಡಿಮೆಯಿದೆ. ರಾಮ ಜನ್ಮಭೂಮಿ ಭಾರತದಲ್ಲಿ ಪೆಟ್ರೋಲ್ ದರ ಅತಿ ಹೆಚ್ಚಿದೆ ಎಂದು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಸರ್ಕಾರ – ಡಿ.ಕೆ.ಶಿವಕುಮಾರ್ ವಾಗ್ದಾಳಿ
ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ದೇಶಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಇದೀಗ ಸ್ವಪಕ್ಷೀಯ ನಾಯಕರೂ ಕಿಡಿಕಾರಿದ್ದಾರೆ.