ದೇಶದ ಪ್ರಸಿದ್ಧ ಸಂಸ್ಥೆಯಾಗಿರುವ ಅಮೂಲ್ ಆಗಿಂದಾಗೆ ಸಾಮಾಜಿಕ ಜಾಲತಾಣದಲ್ಲಿ ವಿನೂತನ ರೀತಿಯ ಡೂಡಲ್ ಬಿಡುಗಡೆ ಮಾಡುತ್ತದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿಯೂ ನೂತನ ಡೂಡಲ್ ಅನ್ನು ಪರಿಚಯಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ “ಸ್ವಾತಂತ್ರ ಭಾರತ್ʼ ಟೆಸ್ಟ್ ಆಫ್ ಫ್ರೀಡಂ ಎನ್ನುವ ಡೂಡಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದೆ. ಈ ಫೋಟೋದಲ್ಲಿ ಆಮೂಲ್ ಬ್ರ್ಯಾಂಡ್ನ ಬಾಲಕಿ ಮಾಸ್ಕ್ ಧರಿಸಿ ಧ್ವಜಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಾಳೆ. ಆಕೆಯೊಂದಿಗೆ ಸೈನಿಕನೊಬ್ಬನನ್ನು ಫೋಟೋದಲ್ಲಿ ಕಾಣಬಹುದು. ಈ ಇಬ್ಬರು ಮಾಸ್ಕ್ ಧರಿಸುವ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸಿದ್ದಾರೆ.
ಈ ಫೋಟೋ ಹಾಕುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡಿದ್ದಾರೆ. ಬೆಳಗ್ಗೆ ಹಾಕಿದ ಕೆಲವೇ ಗಂಟೆಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ನೂರಾರು ಕಾಮೆಂಟ್ ಅನ್ನು ಈ ಪೋಸ್ಟ್ ಪಡೆದಿದೆ.