ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ನಗರಗಳ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದೆ. ಸತತ ನಾಲ್ಕನೇ ವರ್ಷವೂ ಇಂದೋರ್, ದೇಶದ ಸ್ವಚ್ಛ ನಗರ ಎಂಬ ಬಿರುದು ಪಡೆದಿದೆ. ಗುಜರಾತ್ ನ ಸೂರತ್ ಎರಡನೇ ಸ್ಥಾನದಲ್ಲಿದೆ. ನವೀ ಮುಂಬೈ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ಇಂದೋರ್ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸತತ ನಾಲ್ಕು ವರ್ಷಗಳಿಂದ ಇಂದೋರ್ ಜನರು ಸ್ವಚ್ಛತೆಗೆ ಮಹತ್ವ ನೀಡಿದ್ದಾರೆಂದು ಅವರು ಹೇಳಿದ್ದಾರೆ.
ನಗರಾಭಿವೃದ್ಧಿ ಸಚಿವಾಲಯದ ಪ್ರಕಾರ, ಪ್ರಾಚೀನ ಪವಿತ್ರ ನಗರಗಳ ಪಟ್ಟಿಯಲ್ಲಿ ಗಂಗಾ ನದಿ ದಡದಲ್ಲಿರುವ ವಾರಣಾಸಿ ಮೊದಲ ಸ್ಥಾನದಲ್ಲಿದೆ. ಜಲಂಧರ್ ಕಂಟೋನ್ಮೆಂಟ್ ದೇಶದ ಸ್ವಚ್ಚ ಕ್ಯಾಂಪ್ ಪ್ರದೇಶವಾಗಿದೆ. ಇದಕ್ಕಾಗಿ ಕೇಂದ್ರ ಸಚಿವ ಹರ್ದೀಪ್ ಪುರಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ.