ವಿಧಾನ ಸಭಾ ಚುನಾವಣೆಗೆ ಮುಂದಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ ದೊಡ್ಡದಾಗಿಯೇ ನಡೆಯುತ್ತಿದೆ.
ತಾವು ಪ್ರತಿನಿಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲು ಬಿಜೆಪಿ ನಾಯಕ ಸುವೆಂದು ಅಧಿಕಾರಿಗೆ ಸವಾಲೆಸೆದಿದ್ದಾರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ತಾವು ಈ ಕ್ಷೇತ್ರದಿಂದ ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿದ ಟಿಎಂಸಿ ನೇತಾರೆ ಮಮತಾ ಭಾರೀ ಅಚ್ಚರಿ ಮೂಡಿಸಿದ್ದಾರೆ.
ಈ ಸವಾಲನ್ನು ಸ್ವೀಕರಿಸಿರುವ ಅಧಿಕಾರಿ, ಈ ಬಾರಿ ಮಮತಾರನ್ನು ಸೋಲಿಸದೇ ಇದ್ದಲ್ಲಿ ತಾವು ಸಕ್ರಿಯ ರಾಜಕೀಯದಿಂದ ನಿವೃತ್ತರಾಗುವುದಾಗಿ ಶಪಥಗೈದಿದ್ದಾರೆ.
“ನಂದಿಗ್ರಾಮದಿಂದ ಕಣಕ್ಕಿಳಿಯಲು ನನ್ನ ಪಕ್ಷ ಅವಕಾಶ ಕೊಟ್ಟರೆ ನಾನು ಮಮತಾರನ್ನು ಕನಿಷ್ಠ 50000 ಮತಗಳ ಅಂತರದಿಂದ ಸೋಲಿಸುತ್ತೇನೆ ಇಲ್ಲವಾದಲ್ಲಿ ರಾಜಕೀಯ ಬಿಡುತ್ತೇನೆ” ಎಂದಿರುವ ಅಧಿಕಾರಿ, “ನಾನು ಎಲ್ಲಿಂದ ಕಣಕ್ಕಿಳಿಯುತ್ತೇನೆ ಅಥವಾ ಇಳಿಯಲಿದ್ದೇನೋ ಎಂಬುದನ್ನು ಪಕ್ಷ ನಿರ್ಧರಿಸಲಿದೆ” ಎಂದು ಕೇಸರಿ ಪಡೆಯ ರೋಡ್ ಶೋ ಒಂದರ ವೇಳೆ ಹೇಳಿದ್ದಾರೆ.