
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70 ವರ್ಷದ ಹುಟ್ಟುಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 70 ಸಾವಿರ ಗಿಡಗಳನ್ನು ನೆಡಲು ಸೂರತ್ ನಗರದ ಸ್ಥಳೀಯ ಆಡಳಿತ ಹಾಗೂ ಸಂಘ-ಸಂಸ್ಥೆಗಳು ಮುಂದಾಗಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸೂರತ್ ಉಪಮೇಯರ್ ನೀರವ್ ಶಾ, ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಿದ್ದು, ಸೆ.16 ರೊಳಗೆ 70 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದಕ್ಕಾಗಿ 15 ದಿನದಿಂದ ಗಿಡ ನೆಡುವ ಅಭಿಯಾನ ನಡೆಯುತ್ತಿದ್ದು, ಜವಳಿ ನಗರಿ ಸೂರತ್ ನ ವಿವಿಧೆಡೆಗಳಲ್ಲಿ ಈಗಾಗಲೇ ಸಾವಿರಾರು ಗಿಡಗಳನ್ನು ನೆಡಲಾಗಿದೆ. ಇದಕ್ಕಾಗಿ ಹಲವು ಸಂಘಟನೆಗಳೂ ಕೈಜೋಡಿಸಿವೆ. ಮಾಲಿನ್ಯ ಮುಕ್ತ ಮತ್ತು ಹಸಿರೀಕರಣ ನಮ್ಮ ಆದ್ಯತೆ ಎಂದಿದ್ದಾರೆ.