alex Certify ಮದುವೆ ಸಮಾರಂಭಗಳಿಗಾಗಿ ಬಂದಿದೆ ವಿಶೇಷ ಮಾಸ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭಗಳಿಗಾಗಿ ಬಂದಿದೆ ವಿಶೇಷ ಮಾಸ್ಕ್

Surat-based Fashion Designers Come Up With Desi 'Wedding Special' Masks

ಕೋವಿಡ್-19 ಸೋಂಕು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲದೆ ಇರುವ ಕಾರಣ ಮಾಸ್ಕ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಮೊದಲೇ ಎಲ್ಲದರಲ್ಲೂ ಫ್ಯಾಶನ್ ಟೇಸ್ಟ್ ಇರುವ ಮಹಿಳೆಯರಿಗೆ ಈ ಮಾಸ್ಕ್‌ಗಳೂ ಸಹ ಫ್ಯಾಶನ್ ಸ್ಟೇಟ್‌ಮೆಂಟ್ ಕೊಡಲು ಅವಕಾಶವಾಗಿ ಕಾಣುತ್ತಿವೆ.

ಮದುವೆ ಸೀಸನ್ ಮತ್ತೆ ಆರಂಭಗೊಂಡಿರುವ ಈ ವೇಳೆಯಲ್ಲಿ ಸೂರತ್ತಿನ ಫ್ಯಾಶನ್ ವಿನ್ಯಾಸಕರು ಎನ್‌95 ಮಾಸ್ಕ್‌ಗಳಿಗೆ ವಿಶೇಷವಾದ ಲಗಾನ್‌ ಮಾಸ್ಕ್‌ಗಳನ್ನು ಸಜ್ಜು ಮಾಡಿದ್ದಾರೆ. ವಿಶಿಷ್ಟವಾದ ಈ ಮಾಸ್ಕ್‌ಗಳು ಹೊಸ ಟ್ರೆಂಡ್ ಸೃಷ್ಟಿ ಮಾಡುವ ಸಾಧ್ಯತೆ ಇದೆ.

ಹರಳುಗಳು ಹಾಗೂ ವಿಶೇಷ ಕಲ್ಲುಗಳಿಂದ ಡಿಸೈನ್ ಮಾಡಬಲ್ಲ ಈ ಮಾಸ್ಕ್‌‌ಗಳನ್ನು ಮದುಮಗಳು ಹಾಗೂ ಮದುಮಗನಿಗೆ ಮಾತ್ರವಲ್ಲದೇ ಅವರ ಸಂಬಂಧಿಕರಿಗೂ ಸಹ ವಿನ್ಯಾಸ ಮಾಡಲಾಗಿದೆ.

“ಆಸ್ಟ್ರೇಲಿಯಾದಿಂದ ವಿಶೇಷವಾದ ರಾಸಾಯನಿಕಗಳನ್ನು ಆಮದು ಮಾಡಿಕೊಂಡು ಬ್ಯಾಕ್ಟೀರಿಯಾ ನಿರೋಧಕ ಹಾಗೂ ಸೂಕ್ಷ್ಮಜೀವಾಣು ನಿರೋಧಕವಾದ ವಸ್ತ್ರಗಳನ್ನು ಸಿದ್ಧಪಡಿಸಿಕೊಂಡು, ಈ ಎನ್‌95 ತಂತ್ರಜ್ಞಾನವಿರುವ ಮಾಸ್ಕ್‌ಗಳನ್ನು ಖುದ್ದು ನಾವೇ ತಯಾರಿಸುತ್ತಿದ್ದೇವೆ” ಎಂದು ಜವಳಿ ಸಮೂಹದ ನಿದೇರ್ಶಕರಾದ ಸುದರ್ಶನ್ ಮುಂದ್ರಾ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...