ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಜಾರಿಗೆ ಬರುವ ಮೊದಲು ಹಿರಿಯರು ನಿಧನರಾದರೂ ಸಹ ಹೆಣ್ಣುಮಕ್ಕಳಿಗೆ ಪೂರ್ವಜರ ಆಸ್ತಿಯ ಮೇಲೆ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಹಿಂದೂ ಮಹಿಳೆಯರು ತಮ್ಮ ತಂದೆಯ ಆಸ್ತಿಯಲ್ಲಿ ಸಹೋದರನ ಸಮಾನ ಪಾಲನ್ನು ಪಡೆಯುತ್ತಾರೆ. ವಾಸ್ತವವಾಗಿ 2005 ರಲ್ಲಿ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿತ್ತು. ಮಗ ಮತ್ತು ಮಗಳು ಇಬ್ಬರಿಗೂ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎನ್ನಲಾಗಿತ್ತು. ಆದರೆ 2005 ಕ್ಕಿಂತ ಮೊದಲು ತಂದೆ ಸತ್ತರೆ, ಈ ಕಾನೂನು ಅಂತಹ ಕುಟುಂಬಕ್ಕೆ ಅನ್ವಯವಾಗುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿರಲಿಲ್ಲ. ಇಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಈ ಕಾನೂನು ಪ್ರತಿಯೊಂದು ಸಂದರ್ಭದಲ್ಲೂ ಅನ್ವಯಿಸುತ್ತದೆ ಎಂದು ತೀರ್ಪು ನೀಡಿತು.
ಕಾನೂನು ಜಾರಿಗೆ ಬರುವ ಮೊದಲು ತಂದೆ ಸಾವನ್ನಪ್ಪಿದ್ದರೂ ಮಗಳಿಗೆ ಸಮಾನ ಹಕ್ಕು ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.