ತೆಲಂಗಾಣದಲ್ಲಿ 2 ಗಂಟೆಗಳ ಕಾಲ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದ್ದು ತೆಲಂಗಾಣ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಈ ಹಿಂದೆ ತೆಲಂಗಾಣ ಹೈ ಕೋರ್ಟ್ ಯಾವುದೇ ರೀತಿಯ ಪಟಾಕಿ ಬಳಕೆ ಮಾಡದಂತೆ ನಿರ್ದೇಶನ ನೀಡಿತ್ತು. ಅದರಂತೆ ತೆಲಂಗಾಣ ಸರ್ಕಾರ ಪಟಾಕಿ ಬಳಕೆ ಹಾಗೂ ಮಾರಾಟಕ್ಕೆ ನಿರ್ಬಂಧ ಹೇರಿತ್ತು.
ಇದನ್ನ ಪ್ರಶ್ನಿಸಿದ್ದ ತೆಲಂಗಾಣ ಪಟಾಕಿ ಮಾರಾಟಗಾರರ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎನ್ಜಿಟಿ ವಿಧಿಸಿರುವ ಆದೇಶಗಳನ್ನ ಗಮನದಲ್ಲಿಟ್ಟುಕ್ಕೊಂಡು 2 ಗಂಟೆಗಳ ಕಾಲ ಪಟಾಕಿ ಬಳಕೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.