
ಆಧುನಿಕ ಲೈಫ್ ಸ್ಟೈಲ್ ನಿಂದ ರೋಗಗಳನ್ನು ಬರಿಸಿಕೊಂಡು ಆ ನಂತರ ಬೊಜ್ಜು ಕರಗಿಸುವ ಸಲುವಾಗಿ ವ್ಯಾಯಾಮ ಮಾಡಲು ಪರದಾಡುವ ಸಾಕಷ್ಟು ಯುವಕರನ್ನು ನೋಡಿದ್ದೇವೆ. ಇದೇ ವೇಳೆ, ಇಲ್ಲೊಬ್ಬ ಹಿರಿಯ ಮಹಿಳೆ ಯೋಗದ ಕ್ಷಿಷ್ಟಕರ ಆಸನಗಳನ್ನು ಲೀಲಾಜಾಲವಾಗಿ ಮಾಡಿ ತೋರಿಸಿದ್ದಾರೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಧಾ ರಾಮನ್ ತಮ್ಮ ಟ್ವಿಟರ್ ಖಾತೆಯಲ್ಲಿ 51 ಸೆಕೆಂಡ್‌ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸೀರೆಯುಟ್ಟುಕೊಂಡೇ ತಮ್ಮ ಮಂಡಿಗಳನ್ನು ಬೆಂಡ್ ಮಾಡಿ, ಪೂರ್ತಿ ದೇಹವನ್ನೇ ತಮಗೆ ಬೇಕಾದಂತೆ ಸ್ಟ್ರೆಚ್ ಮಾಡುವ ಇವರ ಫ್ಲೆಕ್ಸಿಬಿಲಿಟಿ ಕಂಡು ಜನ ಬೆರಗಾಗಿದ್ದಾರೆ. ಸೀರೆ ಸಹ ಬಹಳ ಫ್ಲೆಕ್ಸಿಬಲ್ ಧಿರಿಸು ಎಂದು ಸಾರಿ ಹೇಳುವಂತೆ ಇದೆ ಈ ವಿಡಿಯೋ.