ಕೊರೊನಾ ಲಾಕ್‌ಡೌನ್ ನಡುವೆ ಆನ್ಲೈನ್ ಕ್ಲಾಸ್‌ಗಳ ಮೂಲಕ ತಮ್ಮ ವಿದ್ಯಾರ್ಥಿಗಳೊಂದಿಗೆ ಟಚ್‌ನಲ್ಲಿರುವ ಶಿಕ್ಷಕರು ಬಹಳ ಕ್ರಿಯಾಶಾಲಿ ಐಡಿಯಾಗಳ ಮೂಲಕ ಬೋರ್ ಆಗದಂತೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಪೋಸ್ಟ್ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ಶಿಕ್ಷಕರೊಬ್ಬರು ಜ್ವಾಲಾಮುಖಿಯನ್ನು ತಮ್ಮದೇ ಶೈಲಿಯಲ್ಲಿ ವಿವರಿಸುತ್ತಿರುವುದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
ಚಿತ್ರವೊಂದನ್ನು ಬಿಡಿಸಿ, ಜ್ವಾಲಾಮುಖಿಯಿಂದ ಹೇಗೆ ಲಾವಾ ಉಕ್ಕಿ ಬರುತ್ತದೆ ಎಂದು ಈ ಶಿಕ್ಷಕ ಮರಾಠಿಯಲ್ಲಿ ಮಾತನಾಡುತ್ತಾ ವಿವರಿಸಿದ್ದಾರೆ. ನೋಡ ನೋಡುತ್ತಲೇ ಕ್ಯಾಮೆರಾದ ಅತಿ ಹತ್ತಿರಕ್ಕೆ ಬರುವ ಶಿಕ್ಷಕ, ಲಾವಾರಸ ಉಕ್ಕುವ ರೀತಿಯಲ್ಲಿ ಸದ್ದು ಮಾಡುತ್ತಾ, ಮುಖಭಾವಗಳ ಮೂಲಕ ತಮ್ಮದೇ ರೀತಿಯಲ್ಲಿ ಈ ನೈಸರ್ಗಿಕ ಪ್ರಕ್ರಿಯೆಯನ್ನು ವಿವರಿಸಿದ್ದಾರೆ.