ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಕೆಲವರು ಶುರುಮಾಡುವ ಒಳ್ಳೆಯ ಕೆಲಸ, ಇತರರಿಗೆ ಮಾದರಿಯಾಗಿ ನಿಲ್ಲುತ್ತದೆ. ಇದೀಗ ಒಬ್ಬ ವೃದ್ಧೆಯೂ ಅನೇಕರಿಗೆ ಮಾದರಿಯಾಗಿದ್ದಾರೆ.
ಹೌದು, ತಮಿಳುನಾಡಿನ 84 ವರ್ಷದ ನಂಜಮ್ಮಲ್ ಕಿಚನ್ ಗಾರ್ಡನ್ ಅನ್ನು ಪ್ರೋತ್ಸಾಹಿಸಲು, ಮುಂದಾಗಿದ್ದು, ಗ್ರಾಮಸ್ಥರಿಗೆ ಉಚಿತವಾಗಿ ತರಕಾರಿ ಸಸಿಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ತಮ್ಮ ಮನೆಯ ತರಕಾರಿಗಳನ್ನು ತಾವೇ ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿದ್ದಾರೆ.
ಈಗಾಗಲೇ ಗ್ರಾಮದ ನೂರು ಕುಟುಂಬದವರಿಗೆ ಈ ರೀತಿ ಸಸಿಗಳನ್ನು ನೀಡಿರುವ ವೃದ್ಧೆ, ಮುಂದಿನ ದಿನದಲ್ಲಿ ಇಡೀ ಊರಿಗೆ ಉಚಿತವಾಗಿ ವಿತರಿಸಲು ನಿರ್ಧರಿಸಿದ್ದಾರಂತೆ.
ಈ ಬಗ್ಗೆ ಮಾತನಾಡಿರುವ ವೃದ್ಧೆ, ಗ್ರಾಮದಲ್ಲಿ ಇರುವ ಎಲ್ಲರೂ ತಮ್ಮ ಅಡುಗೆಗೆ ಬೇಕಿರುವ ತರಕಾರಿಗಳನ್ನು ತಮ್ಮ ಮನೆಯಲ್ಲಿಯೇ ಬೆಳೆಯಬೇಕು ಎನ್ನುವ ಮಾತನ್ನು ಹೇಳಿದ್ದಾರೆ.