ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 10 ಮಹಿಳೆಯರಲ್ಲಿ ನಾಲ್ವರು ಭಾರತೀಯರಾಗಿರುತ್ತಾರೆ ಎಂಬ ಆತಂಕಕಾರಿ ಅಂಶ ಈ ಹಿಂದೆ ಸಮೀಕ್ಷೆಯಲ್ಲಿ ಬಯಲಾಗಿತ್ತು. ಅಲ್ಲದೇ ಇವರಲ್ಲಿ ಬಹುತೇಕರು 40 ವರ್ಷಕ್ಕಿಂತ ಕಡಿಮೆಯವರು ಎಂದು ಹೇಳಲಾಗಿದೆ.
2016ರಲ್ಲಿ ಭಾರತ ಜಗತ್ತಿನ ಶೇ. 17.8 (130 ಕೋಟಿ) ಜನಸಂಖ್ಯೆ ಹೊಂದಿದ್ದು, ಜಗತ್ತಿನಲ್ಲಿ ಸಂಭವಿಸುತ್ತಿರುವ ಮಹಿಳೆಯರ ಆತ್ಮಹತ್ಯೆಯಲ್ಲಿ ಶೇ. 36.6 ಪಾಲು ಭಾರತದ್ದಿದೆ. ಅಂದರೆ ವಿಶ್ವಾದ್ಯಂತ ಅತ್ಮಹತ್ಯೆ ಮಾಡಿಕೊಂಡಿರುವ 2,57,624 ಮಹಿಳೆಯರ ಪೈಕಿ 94,380 ಮಂದಿ ಭಾರತೀಯರು.
ಅಲ್ಲದೇ 1990ರಲ್ಲಿ ಭಾರತದ ಜನಸಂಖ್ಯೆ ಜಗತ್ತಿನ ಜನಸಂಖ್ಯೆಯ ಶೇ. 16.4 ಹಾಗೂ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇ. 25.3 ರಷ್ಟಿತ್ತು ಎಂದು ಹೇಳಲಾಗಿತ್ತು. ಮಾತ್ರವಲ್ಲ ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿನ ಮಹಿಳೆಯರ ಆತ್ಮಹತ್ಯೆ ಪ್ರಮಾಣ 1990ರಲ್ಲಿ ಶೇ.25.3ರಷ್ಟಿದ್ದಿದ್ದು 2016ರಲ್ಲಿ ಶೇ.36.6 ಏರಿತ್ತು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.