ಪ್ರಸಿದ್ಧ ಮರಳು ಶಿಲ್ಪ ಕಲಾವಿದ ಪದ್ಮಶ್ರೀ ಸುದರ್ಶನ ಪಟ್ನಾಯಕ್ ಅವರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 2 ನೇ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮರಳು ಶಿಲ್ಪವನ್ನು ಟ್ವೀಟ್ ಮಾಡಿದ್ದಾರೆ.
ವಾಜಪೇಯಿ ಅವರು 2018 ರ ಆಗಸ್ಟ್ 16 ರಂದು ನಿಧನರಾಗಿದ್ದರು. ಅವರ ಎರಡನೇ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಅವರ ನೆನಪು ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಗೌರವ ಸಲ್ಲಿಸಿದ್ದಾರೆ. ಅದೇ ರೀತಿ ಪಟ್ನಾಯಕ್ ಅವರೂ ತಮ್ಮ ಗೌರವ ಸಲ್ಲಿಸಿದ್ದಾರೆ.
‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜೀ ಅವರಿಗೆ ಗೌರವಪೂರ್ವಕ ನಮನಗಳು. ಅವರ ಪುಣ್ಯ ಸ್ಮರಣೆ ಸಂದರ್ಭದಲ್ಲಿ ನಾನು ನನ್ನ ಮರಳು ಶಿಲ್ಪವೊಂದನ್ನು ಶೇರ್ ಮಾಡುತ್ತಿದ್ದೇನೆ’ ಎಂದು ಸುದರ್ಶನ ಪಟ್ನಾಯಕ್ ಬರೆದಿದ್ದಾರೆ.
ಸುದರ್ಶನ ಪಟ್ನಾಯಕ್ ಅವರು 2019 ರಲ್ಲಿ ವಾಜಪೇಯಿ ಅವರ ಮೊದಲ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಈ ಮರಳು ಶಿಲ್ಪವನ್ನು ರಚನೆ ಮಾಡಿದ್ದರು. ಮರಳು ಶಿಲ್ಪಕ್ಕೆ ಹಾಗೂ ಅಪರೂಪದ ನಾಯಕ ವಾಜಪೇಯಿ ಅವರಿಗೆ ನೆಟ್ಟಿಗರು ನಮನ ಸಲ್ಲಿಸಿದ್ದಾರೆ. ಪಟ್ನಾಯಕ್ ಅವರ ಟ್ವೀಟ್ ಅನ್ನು 5,700 ಜನ ಇಷ್ಟ ಪಟ್ಟಿದ್ದು, 888 ಜನ ಹಂಚಿಕೊಂಡಿದ್ದಾರೆ.
https://twitter.com/i_Ambuj/status/1294834028999147520?ref_src=twsrc%5Etfw%7Ctwcamp%5Etweetembed%7Ctwterm%5E1294834028999147520%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fsudarsan-pattnaik-shares-old-sand-portrait-of-atal-bihari-vajpayee-as-tribute-on-second-death-anniversary-2792319.html