ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆಯು ಭಾರೀ ಭೀತಿಯ ವಾತಾವರಣ ಸೃಷ್ಟಿ ಮಾಡಿರುವ ಕಾರಣ ನಾವೆಲ್ಲಾ ನಮ್ಮ ನಮ್ಮ ಮನೆಗಳಿಂದ ಹೊರಬರಲೂ ಸಹ ಹಿಂದೆ ಮುಂದೆ ಯೋಚಿಸಿ ನೋಡುವಂತೆ ಆಗಿಬಿಟ್ಟಿದೆ. ಸೋಂಕು ಹಬ್ಬುವುದನ್ನು ತಡೆಗಟ್ಟಲೆಂದು ಅನೇಕ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಘೋಷಿಸಿವೆ.
ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು, ಪುರಿ ಕಡಲ ತೀರದಲ್ಲಿ ’ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಎಂಬ ಸಂದೇಶ ಇರುವ ಮರಳು ಕಲಾಕೃತಿಯೊಂದನ್ನು ರಚಿಸಿದ್ದು ತಮ್ಮ ಅಭಿಮಾನಿಗಳಲ್ಲಿ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.
ಕೊರೋನಾ ಭಯದಿಂದ ರೈಲಿಗೆ ತಲೆಕೊಟ್ಟ ಪತ್ರಕರ್ತ
“ಕೋವಿಡ್-19 ಸೋಂಕು ಹಬ್ಬುವುದನ್ನು ತಡೆಗಟ್ಟಲು ಇಂದಿನಿಂದ ಒಡಿಶಾದಲ್ಲಿ 14 ದಿನಗಳ ಲಾಕ್‌ಡೌನ್ ಆರಂಭಗೊಳ್ಳಲಿದೆ. ಈ ಅವಧಿಯಲ್ಲಿ ಸರ್ಕಾರದೊಂದಿಗೆ ಸಹಕರಿಸಿ ಎಂಬುದು ನನ್ನ ಕಳಕಳಿಯ ಮನವಿ” ಎಂದು ಕ್ಯಾಪ್ಷನ್ ಒಂದನ್ನು ಹಾಕಿ ಪಟ್ನಾಯಕ್ ಅವರು ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.