alex Certify ಕನ್ನಡಕಧಾರಿಗಳಿಗೆ ಖುಷಿ ಸುದ್ದಿ: ಕೊರೊನಾ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡಕಧಾರಿಗಳಿಗೆ ಖುಷಿ ಸುದ್ದಿ: ಕೊರೊನಾ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕನ್ನಡಕಧಾರಿಗಳಿಗೆ ಕೊರೊನಾ ಸೋಂಕು ಹರಡುವ ಅಪಾಯ ಕಡಿಮೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಕನ್ನಡಕ ಧರಿಸುವವರು ಸಾಮಾನ್ಯರಿಗಿಂತ ಕಡಿಮೆ ಬಾರಿ ಕಣ್ಣನ್ನ ಉಜ್ಜಿಕೊಳ್ಳೋದ್ರಿಂದ ಈ ಅಪಾಯ ಕಡಿಮೆ ಎಂದು ಹೇಳಲಾಗಿದೆ.

223 ಮಂದಿ ಪುರುಷರು ಹಾಗೂ 81 ಮಂದಿ ಮಹಿಳೆಯರ ಮೇಲೆ ಈ ಸಂಶೋಧನೆಯನ್ನ ನಡೆಸಲಾಗಿತ್ತು. ಉತ್ತರ ಭಾರತದ 10 ರಿಂದ 80 ವರ್ಷ ವಯಸ್ಸಿನೊಳಗಿನವರು ಈ ಅಧ್ಯಯನದಲ್ಲಿ ಇದ್ದರು.

ಅಧ್ಯಯನದಲ್ಲಿ ಭಾಗಿಯಾದವರು ಒಂದು ಗಂಟೆಯಲ್ಲಿ ಸರಾಸರಿ 23 ಬಾರಿ ತಮ್ಮ ಮುಖವನ್ನ ಮುಟ್ಟಿಕೊಂಡಿದ್ದಾರೆ ಹಾಗೂ ಮೂರು ಬಾರಿ ತಮ್ಮ ಕಣ್ಣನ್ನ ಮುಟ್ಟಿದ್ದಾರೆ.

ಇದು ಕನ್ನಡಕ ಧರಿಸದವರಿಗೆ ಹೋಲಿಸಿದ್ರೆ ಕಡಿಮೆಯಾಗಿದೆ. ಹೀಗಾಗಿ ಕನ್ನಡಕಧಾರಿಗಳು ಕನ್ನಡಕ ಧರಿಸದೇ ಇರುವವರಿಗೆ ಹೋಲಿಸಿದ್ರೆ 2 ರಿಂದ 3 ಪ್ರತಿಶತ ಹೆಚ್ಚು ಸೇಫ್​ ಎಂದು ಅಧ್ಯಯನ ಹೇಳಿದೆ.

ಪದೇ ಪದೇ ಕಣ್ಣನ್ನ ಮುಟ್ಟಿಕೊಳ್ಳೋದ್ರಿಂದ ಕೊರೊನಾ ಹರಡುವ ಅಪಾಯ ಹೆಚ್ಚು ಎಂದು ಈಗಾಗಲೇ ಸಾಕಷ್ಟು ಮಂದಿ ಹೇಳಿದ್ದಾರೆ. ಕೈಯನ್ನು ಸರಿಯಾಗಿ ತೊಳೆದುಕೊಳ್ಳದೇ ಮುಖವನ್ನ ಮುಟ್ಟಿಕೊಳ್ಳಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...