
ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪ್ರೋತ್ಸಾಹ ತುಂಬಿದ್ದಾರೆ.
ವಿದ್ಯಾರ್ಥಿಗಳ ಜೊತೆ ಆನ್ಲೈನ್ ಶಿಕ್ಷಣದ ಕುರಿತಾಗಿ ಪ್ರಸ್ತಾಪಿಸಿದ ಅವರು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾರೆ.
ದೇಶವನ್ನು ಕಟ್ಟುವಲ್ಲಿ ಯುವಕರು ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಭಾರತದ ಭವಿಷ್ಯ ದೇಶದ ಯುವಕರ ಕೈಯಲ್ಲಿದೆ. ಯುವಕರು ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಹರಿಯಾಣದ ಕೃತಿಕಾ, ಕೇರಳದ ವಿನಾಯಕ, ಉತ್ತರಪ್ರದೇಶದ ಉಸ್ಮಾನ್ ಸೇರಿದಂತೆ ಹಲವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಮೋದಿ ಅವರ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.