alex Certify ಬಿಗ್‌ ನ್ಯೂಸ್:‌ ಸೋಂಕಿತರ ಸಂಪರ್ಕವಿಲ್ಲದೆ ಮಾದರಿ ಸಂಗ್ರಹಿಸುವ ಉಪಕರಣ ರೂಪಿಸಿದ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್:‌ ಸೋಂಕಿತರ ಸಂಪರ್ಕವಿಲ್ಲದೆ ಮಾದರಿ ಸಂಗ್ರಹಿಸುವ ಉಪಕರಣ ರೂಪಿಸಿದ ವಿದ್ಯಾರ್ಥಿಗಳು

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವ ಮಧ್ಯೆ, ಕೋವಿಡ್‌-19 ಪರೀಕ್ಷೆಗೆ ತೆರಳುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ತಗುಲುವ ಆತಂಕವಿದೆ. ಆದ್ದರಿಂದ ಇದನ್ನು ತಪ್ಪಿಸಲು ಹಿಮಾಚಲ ಪ್ರದೇಶದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೊಸ ಘಟಕವನ್ನು ಸಿದ್ಧಪಡಿಸಿದ್ದಾರೆ.

ಹೌದು, ಹಿಮಾಚಲ ಪ್ರದೇಶ ಮೂಲದ ಐವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಕೊರೋನಾ ಪರೀಕ್ಷೆಗೆ ಮಾಡುವ ಸಿಬ್ಬಂದಿಗಳನ್ನು ಗಮನದಲ್ಲಿರಿಸಿಕೊಂಡು ಘಟಕವೊಂದನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಗಾಳಿ ಸಂಚಾರ ಹಾಗೂ ಶಂಕಿತರ ಸಂಪರ್ಕ ಇಲ್ಲದೇ ಮಾದರಿ ಸಂಗ್ರಹಿಸಬಹುದಾಗಿದೆ. ಇದರಿಂದ ಸೋಂಕಿತರ ಮಾದರಿ ಕಲೆ ಹಾಕುವಾಗ, ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ತಗುಲುವ ಆತಂಕ ದೂರಾಗಿದೆ ಎನ್ನಲಾಗಿದೆ.

ಈ ಘಟಕವನ್ನು ಸಿದ್ಧಪಡಿಸಲು 25 ಸಾವಿರ ಹಣ ಹಾಗೂ ಆರು ದಿನಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಈಗಾಗಲೇ ಘಟಕದ ಬಗ್ಗೆ ಆಂತರಿಕ ಪರೀಕ್ಷೆ ನಡೆಸಲಾಗಿದ್ದು, ಸುರಕ್ಷಿತ ಎನ್ನುವುದು ಖಾತ್ರಿಯಾಗಿರುವುದರಿಂದ ಸರಕಾರಕ್ಕೆ ಹಸ್ತಾಂತರಿಸುವ ಸಿದ್ಧತೆ ನಡೆಸಿಕೊಂಡಿದ್ದಾರೆ. ಘಟಕದ ಹೊರಭಾಗದಲ್ಲಿ ಎರಡು ಗ್ಲೌಸ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ಸೋಂಕಿತರ ಮಾದರಿ ಸಂಗ್ರಹಿಸಬಹುದಾಗಿದೆ. ಇದರಿಂದ ವೈದ್ಯರಿಗೆ ಕೊರೋನಾ ತಗುಲುವುದನ್ನು ತಪ್ಪಿಸಬಹುದು ಎಂದು ತಂಡದ ಸದಸ್ಯ ಅಚಲ್‌ ಸೈನಿ ಹೇಳಿದ್ದಾರೆ.

https://www.facebook.com/cnnnews18/videos/1362405977297063

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...