ಬರೋಬ್ಬರಿ 8 ತಿಂಗಳ ಬಳಿಕ ಉತ್ತರಾಖಂಡ್ ರಾಜ್ಯದಲ್ಲಿ ಶಾಲೆಗಳನ್ನ ಪುನಾರಂಭ ಮಾಡಲಾಗಿದೆ. ಆದರೆ ಅಲ್ಮೋರಾ ಜಿಲ್ಲೆಯ ರಾಣಿಕೇತ್ನ ಶಾಲೆಯೊಂದರಲ್ಲಿ 12ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ ಹೆಚ್ಚಾಗಿದೆ.
ಶಾಲೆಗೆ ಹಾಜರಾದ ವಿದ್ಯಾರ್ಥಿಯಲ್ಲೇ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆತನ ಸಂಪರ್ಕದಲ್ಲಿದ್ದ 12ಕ್ಕೂಅಧಿಕ ವಿದ್ಯಾರ್ಥಿಗಳನ್ನ ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಶಾಲಾ ಕಟ್ಟಡವನ್ನ 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ರಾಣಿಖೇತ್‌ನ ಶಾಲೆಯಲ್ಲಿ 12 ನೇ ತರಗತಿಯ ವಿದ್ಯಾರ್ಥಿ ಧನಾತ್ಮಕ ಪರೀಕ್ಷೆ ಮಾಡಿದ್ದಾನೆ. ಅವನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಒಂದು ಡಜನ್ಗೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿಡಲಾಗಿದೆ ಮತ್ತು ಮೂರು ದಿನಗಳ ಕಾಲ ಶಾಲೆಗೆ ಮೊಹರು ಹಾಕಲಾಗಿದೆ.
ಸೋಂಕಿತ ವಿದ್ಯಾರ್ಥಿಗೆ ಕೋವಿಡ್ ಚಿಕಿತ್ಸೆ ನೀಡಲಾಗ್ತಾ ಇದ್ದರೆ ಸಂಪರ್ಕಿತ ವಿದ್ಯಾರ್ಥಿಗಳ ಸ್ವ್ಯಾಬ್ ಟೆಸ್ಟ್ ಮಾಡಲಾಗಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.