ಮಕ್ಕಳಿಗೆ ಓದಿದ್ದು ನೆನಪಿನಲ್ಲಿರೋದು ಕಷ್ಟ. ಸಾಮಾನ್ಯವಾಗಿ ಎಲ್ಲ ಪಾಲಕರು ಈ ಬಗ್ಗೆ ಚಿಂತೆ ವ್ಯಕ್ತಪಡಿಸ್ತಾರೆ. ಆದ್ರೆ ದೆಹಲಿಯಲ್ಲಿ ಶಿಕ್ಷಕನೊಬ್ಬ ಮಕ್ಕಳಿಗೆ ಓದಿದ್ದು ನೆನಪಿರಲಿ ಎನ್ನುವ ಕಾರಣಕ್ಕೆ ಇಂಜೆಕ್ಷನ್ ನೀಡಿದ್ದಾನೆ. ಭಾನುವಾರ ಮಕ್ಕಳಿಗೆ ಇಂಜೆಕ್ಷನ್ ನೀಡ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಶಿಕ್ಷಕನನ್ನು ಬಂಧಿಸಿರುವ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಸಂದೀಪ್ ಹೆಸರಿನ ಶಿಕ್ಷಕ ತನ್ನ ಸುತ್ತಮುತ್ತಲಿರುವ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಹೇಳಿಕೊಡ್ತಿದ್ದ. ಈ ಮಕ್ಕಳಿಗೆ ಓದಿದ್ದು ನೆನಪಿರಲಿ ಎನ್ನುವ ಕಾರಣಕ್ಕೆ ಶಿಕ್ಷಕ ಸಲೈನ್ ಇಂಜೆಕ್ಷನ್ ನೀಡ್ತಿದ್ದ.
ಸಂದೀಪ್, ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ಬಿ.ಎ. ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾನೆ. ಸಂದೀಪ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲ ವಿಷ್ಯವನ್ನು ಸಂದೀಪ್ ಬಾಯ್ಬಿಟ್ಟಿದ್ದಾನೆ.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಏಪ್ರಿಲ್ 1ರಿಂದ ಪೂರ್ಣಪ್ರಮಾಣದಲ್ಲಿ ಸೇವೆ ಆರಂಭ ಸಾಧ್ಯತೆ
ಸಂದೀಪ್ ಯುಟ್ಯೂಬ್ ವಿಡಿಯೋ ಒಂದನ್ನು ನೋಡಿದ್ದನಂತೆ. ಅದ್ರಲ್ಲಿ ಸಲೈನ್ ಇಂಜೆಕ್ಷನ್ ನೀಡಿ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲಾಗಿತ್ತಂತೆ. ಇದನ್ನು ನೋಡಿದ ಸಂದೀಪ್, ತಾನು ಟ್ಯೂಷನ್ ಹೇಳ್ತಿದ್ದ ಮಕ್ಕಳಿಗೂ ಇಂಜೆಕ್ಷನ್ ನೀಡಿದ್ದಾನೆ. ಇಂಜೆಕ್ಷನ್ ಪಡೆದ ಮಕ್ಕಳು ಆರೋಗ್ಯವಾಗಿದ್ದಾರೆ. ಆದ್ರೆ ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.