ಆ ವಿದ್ಯಾರ್ಥಿನಿ 12 ಕಿ.ಮೀ. ದೂರದ ಶಾಲೆಗೆ ಪ್ರತಿನಿತ್ಯ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದಳು. ಇದರ ಜೊತೆಗೆ ಪರಿಶ್ರಮಪಟ್ಟು ವ್ಯಾಸಂಗ ಮಾಡಿದ್ದು, ಇದಕ್ಕೆ ಈಗ ಫಲ ಸಿಕ್ಕಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಆಕೆ 8ನೇ ರ್ಯಾಂಕ್ ಗಳಿಸಿದ್ದಾಳೆ.
ಹೌದು, ಮಧ್ಯಪ್ರದೇಶದ ಗ್ರಾಮವೊಂದರ 10ನೇ ತರಗತಿ ವಿದ್ಯಾರ್ಥಿನಿ ರೋಷನಿ ಇಂಥದ್ದೊಂದು ಸಾಧನೆ ಮಾಡಿದ್ದು, ಈಕೆ ತಮ್ಮ ಗ್ರಾಮವಾದ ಅಜ್ನೋಲ್ ನಿಂದ 12 ಕಿ.ಮೀ. ದೂರದಲ್ಲಿರುವ ಮೆಹಗಾನ್ ಸರ್ಕಾರಿ ಶಾಲೆಗೆ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದಳು.
ಬಡ ರೈತನ ಪುತ್ರಿಯಾದ ರೋಷನಿ ಭಡೋರಿಯಾ 8 ನೇ ತರಗತಿಯಿಂದ 10ನೇ ತರಗತಿವರೆಗೆ ಪ್ರತಿನಿತ್ಯವೂ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದಳು. ಪ್ರತಿಭಾವಂತೆಯಾಗಿದ್ದ ಆಕೆ ತನಗೆ ಸಿಕ್ಕ ಸಮಯದಲ್ಲಿ ಪರಿಶ್ರಮ ಪಟ್ಟು ವ್ಯಾಸಂಗ ಮಾಡಿದ್ದು, ಈಗ ಹೊರಬಿದ್ದಿರುವ 10ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ.98.75 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸಿದ್ದಾಳೆ. ಅಂದಹಾಗೆ ಕೊರೊನಾ ವ್ಯಾಪಿಸುವ ಮೊದಲೇ ಮಧ್ಯಪ್ರದೇಶದಲ್ಲಿ 10ನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ.