ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ತಪ್ಪು ಮಾಹಿತಿಯಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ವೈದ್ಯೆ ಆಗಬೇಕೆಂಬ ಕನಸನ್ನ ಹೊಂದಿದ್ದ ವಿಧಿ ಸೂರ್ಯವಂಶಿ ಈ ಬಾರಿ ನೀಟ್ ಪರೀಕ್ಷೆಯನ್ನ ಎದುರಿಸಿದ್ದರು. ಆದರೆ ಫಲಿತಾಂಶ ಚೆಕ್ ಮಾಡ್ತಿದ್ದ ವೇಳೆ ತಾಂತ್ರಿಕ ದೋಷದಿಂದಾಗಿ ಆಕೆಗೆ ಕೇವಲ 6 ಮಾರ್ಕ್ಸ್ ಬಂದಿದೆ ಅಂತಾ ವೆಬ್ಸೈಟ್ ತೋರಿಸಿದೆ.
ಇಷ್ಟು ಬುದ್ಧಿವಂತ ವಿದ್ಯಾರ್ಥಿನಿ ಕಡಿಮೆ ಮಾರ್ಕ್ಸ್ ಪಡೆಯೋಕೆ ಸಾಧ್ಯವೇ ಇಲ್ಲ ಅಂತಾ ಎಂದುಕೊಂಡ ಪೋಷಕರು ಮತ್ತೊಮ್ಮೆ ಅಂಕ ಪರಿಶೀಲನೆ ಮಾಡಿದಾಗ ಆಕೆ 720ಕ್ಕೆ 590 ಅಂಕಗಳನ್ನ ಪಡೆದುಕೊಂಡಿರೋದು ಬೆಳಕಿಗೆ ಬಂದಿದೆ.
ಆದರೆ ಅಷ್ಟು ಕಡಿಮೆ ಅಂಕ ಬಂದಿದ್ದರಿಂದ ಮನನೊಂದಿದ್ದ ವಿಧಿ, ಮತ್ತೊಮ್ಮೆ ಅಂಕ ಪರಿಶೀಲನೆ ಮಾಡೋದ್ರೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.