
ಅಮೆರಿಕ ಬಳಿಕ ಅತ್ಯಂತ ಹೆಚ್ಚು ಕೋವಿಡ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಷ್ಟು ಕೆಟ್ಟ ಸ್ಥಿತಿಯಲ್ಲಿ ದೇಶ ಇರುವ ಕಾರಣ ರಾಜಸ್ಥಾನದ ಜೋಧ್ಫುರ ಜಿಲ್ಲಾಡಳಿತವು ‘No Mask – No Entry’ ಹಾಗೂ ‘No Mask – No Service’ ಅಭಿಯಾನಕ್ಕೆ ಚಾಲನೆ ಕೊಟ್ಟಿದೆ. ಇದೇ ರೀತಿಯ ಅಭಿಯಾನಕ್ಕೆ ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಚಾಲನೆ ನೀಡಲಾಗಿತ್ತು.
ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಎಲ್ಲೆಡೆ ವಾಹನಗಳ ಮೇಲೆ ಅಂಟಿಸುತ್ತಿದ್ದು, ಈ ಸಂಬಂಧ ಮಾತನಾಡಿದ ಜೋಧ್ಪುರ ಜಿಲ್ಲೆಯ ಕಲೆಕ್ಟರ್, “ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ, ಕೋವಿಡ್-19 ವ್ಯಾಪಿಸದಂತೆ ಕ್ರಮ ತೆಗೆದುಕೊಳ್ಳುವ ಸಂಬಂಧ ಜಾಗೃತಿ ಮೂಡಿಸುವುದೂ ಅಗತ್ಯವಾಗಿದೆ. ರಾಜ್ಯದಲ್ಲಿ ತೀವ್ರವಾದ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ” ಎಂದಿದ್ದಾರೆ.
ರಾಜಸ್ಥಾನದಲ್ಲಿ ಅದಾಗಲೇ 1,00,365 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 1,382 ಮಂದಿ ಮೃತಪಟ್ಟಿದ್ದಾರೆ.