ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆಯಲ್ಲಿದ್ದಾರೆ. ನೀವೂ ಕಡಿಮೆ ಬಜೆಟ್ ನಲ್ಲಿ ವ್ಯವಹಾರ ಶುರು ಮಾಡಲು ಬಯಸಿದ್ದರೆ ತ್ಯಾಜ್ಯ ವ್ಯವಹಾರ ಶುರು ಮಾಡಬಹುದು. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು.
ವಿಶ್ವಾದ್ಯಂತ ಪ್ರತಿವರ್ಷ 2 ಬಿಲಿಯನ್ ಟನ್‌ಗಿಂತಲೂ ಹೆಚ್ಚು ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುತ್ತವೆ. ಭಾರತದಲ್ಲಿ 277 ದಶಲಕ್ಷ ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಪ್ರಯತ್ನಗಳು ನಡೆದಿವೆ. ಅನೇಕರು ತ್ಯಾಜ್ಯಗಳಿಂದ ಮನೆ ಅಲಂಕಾರಿಕ ವಸ್ತುಗಳು, ಆಭರಣಗಳು, ವರ್ಣಚಿತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದ್ರಿಂದ ಸಾಕಷ್ಟು ಹಣ ಸಂಪಾದನೆ ಮಾಡ್ತಿದ್ದಾರೆ. ರಾಂಚಿಯ ಯುವಕ ಶುಭಮ್ ಕುಮಾರ್, ಬನಾರಸ್‌ನ ಶಿಖಾ ಸಾಹ್ ಇದಕ್ಕೆ ಮಾದರಿ.
ಈ ವ್ಯವಹಾರ ಶುರು ಮಾಡುವ ಮೊದಲು ನೀವು ಮನೆ ಸುತ್ತಮುತ್ತಲಿರುವ ತ್ಯಾಜ್ಯವನ್ನು ಸಂಗ್ರಹಿಸಿ. ನಗರ ನಿಗಮದ ತ್ಯಾಜ್ಯವನ್ನು ಕೂಡ ನೀವು ಪಡೆಯಬಹುದು. ಕೆಲ ಕಂಪನಿಗಳು ತ್ಯಾಜ್ಯವನ್ನು ನೀಡುತ್ತವೆ. ಅವರಿಂದ ಸಂಗ್ರಹಿಸಬಹುದು. ನಂತ್ರ ಅದನ್ನು ಸ್ವಚ್ಛಗೊಳಿಸಬೇಕು. ವಿನ್ಯಾಸಗೊಳಿಸಿ ಬಣ್ಣ ಹಚ್ಚಬೇಕು. ಬಿದಿರಿನ ಹಲ್ಲುಜ್ಜುವ ಬ್ರಷ್ ತಯಾರಿಸಬಹುದು. ಅಮೆಜಾನ್ ನಲ್ಲಿ ಇದ್ರ ಬೆಲೆ 70 ರೂಪಾಯಿ.
ಇದಲ್ಲದೆ ಕಪ್ ಗಳು, ಮರದ ಕರಕುಶಲ ವಸ್ತುಗಳು, ಕೆಟಲ್, ಗಾಜು, ಬಾಚಣಿಗೆ ಮತ್ತು ಇತರ ಮನೆಯ ಅಲಂಕಾರ ವಸ್ತುಗಳನ್ನು ತಯಾರಿಸಬಹುದು. ಅಂತಿಮವಾಗಿ ಮಾರ್ಕೆಟಿಂಗ್ ಕೆಲಸ ಪ್ರಾರಂಭವಾಗುತ್ತದೆ. ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಬಹುದು. ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಬಹುದು.
ಶುಭಮ್, ಮೂರು ಜನರೊಂದಿಗೆ ಸೇರಿ ಆಟೋದಲ್ಲಿ ಮನೆ ಮನೆಗೆ ಹೋಗಿ ತ್ಯಾಜ್ಯ ಸಂಗ್ರಹಿಸಿದ್ದರು. ತಿಂಗಳಲ್ಲಿ 40 ರಿಂದ 50 ಟನ್ ಸ್ಕ್ರ್ಯಾಪ್ ಸಂಗ್ರಹಿಸುತ್ತಾರೆ. ನಾಲ್ಕು ಜನರೊಂದಿಗೆ ವ್ಯವಹಾರ ಶುರು ಮಾಡಿದ್ದ ಶುಭಮ್ ಈಗ 28 ಜನರಿಗೆ ಉದ್ಯೋಗ ನೀಡಿದ್ದಾರೆ.