ಜೈಪುರ್: ಶಾಸಕರು, ಸಂಸದರಿಗೆ ಎದ್ದುನಿಂತು ಗೌರವ ಸೂಚಿಸುವಂತೆ ರಾಜಸ್ಥಾನ ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದೆ.
ಶಾಸಕರು ಅಥವಾ ಸಂಸದರು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ಕಚೇರಿಯಿಂದ ಹೊರಡುವಾಗ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೀವ್ ಸ್ವರೂಪ್ ಈ ಬಗ್ಗೆ ಸೂಚನೆ ನೀಡಿ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿದ್ದಾರೆ.