ಆಗ್ರಾದ ಮನೆಯೊಂದರಲ್ಲಿ ಕಾಣಿಸಿಕೊಂಡ ಕಾರ್ಕೋಟಕ ವಿಷ ಹೊಂದಿರುವ ಹಾವನ್ನು ಕಂಡು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.
ಆಗ್ರಾದಲ್ಲಿರುವ ಮನೆಯೊಂದರ ಅಡುಗೆ ಕೋಣೆಯಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದೆ. ಈ ನಾಗರ ಪ್ರಬೇಧದಲ್ಲಿರುವ ಸಾಮಾನ್ಯ ಹಾವಿಗಿಂತ ಹೆಚ್ಚಿನ ವಿಷ ಈ ಹಾವಿನಲ್ಲಿರುತ್ತದೆಯಂತೆ. ಈ ಹಾವನ್ನು ಕಂಡ ಕೂಡಲೇ ಗಾಬರಿ ಬಿದ್ದಿರುವ ಕುಟುಂಬ ಸದಸ್ಯರು, ಕೂಡಲೇ ವನ್ಯಜೀವಿ ರಕ್ಷಣಾ ಸಹಾಯವಾಣಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸುಮಾರು 30 ಕಿಮೀ ದೂರದಿಂದ ಆಗಮಿಸಿ, ಹಾವನ್ನು ರಕ್ಷಿಸಿದ್ದಾರೆ.
ಕ್ರೇಟ್ಸ್ ಪ್ರಬೇಧದ ಹಾವಿನ ಬಗ್ಗೆ ಮಾತನಾಡಿರುವ ವೈಲ್ಡ್‌ಲೈಫ್ ಎಸ್‌ಒಎಸ್‌ನ ಸಹ – ಸಂಸ್ಥಾಪಕ ಕಾರ್ತಿಕ್ ಸತ್ಯನಾರಾಯಣ, ಕ್ರೇಟ್ ಜಗತ್ತಿನಲ್ಲಿ ಸಿಗುವ ಕರ್ಕೋಟಕ ವಿಷ ಹೊಂದಿರುವ ಹಾವುಗಳ ಪೈಕಿ ಒಂದು. ಆದರೆ ಇದು ನಾಚಿಕೆ ಸ್ವಭಾವದ ಹಾವು. ಮನುಷ್ಯರು ಕಂಡ ಕೂಡಲೇ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದಿದ್ದಾರೆ.