ಚೀನಾಗೆ ಶ್ರೀಲಂಕಾ ಸರ್ಕಾರ ಶಾಕ್ ನೀಡಿದೆ. ಇದುವರೆಗೂ ತಾನು ಬಳಸುತ್ತಿದ್ದ ಚೀನಾ ತಯಾರಿಕೆಯ ಲಸಿಕೆಯನ್ನು ಮುಂದುವರಿಸದೇ ಇರಲು ತೀರ್ಮಾನಿಸಿದ್ದು, ಬದಲಾಗಿ ಭಾರತದಲ್ಲಿ ತಯಾರಾಗಿರುವ ಆಸ್ಟ್ರಾಜೆನಿಕಾ ಲಸಿಕೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಶ್ರೀಲಂಕಾ ಈಗಾಗಲೇ ಭಾರತದಿಂದ ಉಡುಗೊರೆ ರೂಪದಲ್ಲಿ 5 ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ಪಡೆದುಕೊಂಡಿದ್ದು, ಇದೀಗ ಹೆಚ್ಚುವರಿಯಾಗಿ 1.35 ಕೋಟಿ ಡೋಸ್ ಗಳನ್ನು ಖರೀದಿಸಲು ಮುಂದಾಗಿದೆ. ಇದಕ್ಕಾಗಿ 380 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲು ಶ್ರೀಲಂಕಾ ಸರ್ಕಾರ ಮುಂದಾಗಿದೆ.
ಶ್ರೀಲಂಕಾ ಮೊದಲ ಹಂತದ ಲಸಿಕಾ ಅಭಿಯಾನವನ್ನು ಜನವರಿ ತಿಂಗಳಿನಿಂದ ಆರಂಭಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಭಾರತದ ಲಸಿಕೆ ಪರಿಣಾಮಕಾರಿಯಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.