ಬರ್ತಡೇ ದಿನ ಅಂದರೆ ಸಾಕು. ಖುಷಿನೇ ಬೇರೆ. ಕೇರಳದ ಕಪ್ಪುಕಾಡು ಎಂಬಲ್ಲಿ ಆನೆ ಮರಿಗೆ ಕೇಕ್ ಕಟ್ ಮಾಡಿಸಿ ಬರ್ತಡೇ ಆಚರಿಸಿದ್ದಾರೆ.
ಕೇರಳದ ಕಪ್ಪುಕಾಡು ಆನೆಗಳ ಪುನವರ್ಸತಿ ಕೇಂದ್ರದಲ್ಲಿರುವ ಶ್ರೀಕುಟ್ಟಿ ಹೆಸರಿನ ಆನೆ ನವೆಂಬರ್ 8ರಂದು ಒಂದು ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪುನವರ್ಸತಿ ಕೇಂದ್ರದ ಸಿಬ್ಬಂದಿ ಪುಟಾಣಿ ಆನೆಗೆ ಕೇಕ್ ಕಟ್ ಮಾಡಿಸಿದ್ದಾರೆ.
ಅನಾನಸ್, ಕಬ್ಬಿನ ಹಾಲು ಹಾಗೂ ಬೆಲ್ಲದಿಂದ ಕೂಡಿದ ಕೇಕ್ನ್ನ ಆನೆಗಾಗಿ ತಯಾರಿಸಲಾಗಿತ್ತು. ಕೇಕ್ ಕಟ್ ಮಾಡಿದ ಬಳಿಕ ಆನೆಗೆ ಶಾಲನ್ನ ಹೊದೆಸಿ ಸನ್ಮಾನಿಸಲಾಯ್ತು.
ಆನೆಯ ಬರ್ತಡೇ ಸಂಭ್ರಮಾಚರಣೆ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.