
ಹೀಗಾಗಿ ನಾಸಿಕ್ ಪೊಲೀಸ್ ಅಧಿಕಾರಿಗಳು ಶ್ವಾನ ದಳದಲ್ಲಿ 11 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲ್ಯಾಬ್ರೈಡರ್ ತಳಿಯ ನಾಯಿಗೆ ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ.
ಫೆಬ್ರವರಿ 24ರಂದು ನಾಸಿಕ್ನ ಪೊಲೀಸ್ ಅಧಿಕಾರಿಗಳು ಶ್ವಾನದಳದ ಲ್ಯಾಬ್ರಿಡರ್ ಶ್ವಾನಕ್ಕೆ ಬೀಳ್ಕೊಡುಗೆ ನೀಡಲು ಬಯಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯ ವಾಹನವನ್ನ ಹೂವಿನಿಂದ ಅಲಂಕರಿಸಿ ಅದರ ಮೇಲೆ ಶ್ವಾನವನ್ನ ಕೂರಿಸಿ ಮೆರವಣಿಗೆ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಮೆಂಟ್ ವಿಭಾಗದಲ್ಲಿ ನೆಟ್ಟಿಗರು ಶ್ವಾನದ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.