alex Certify ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣೆಯಲ್ಲಿ ಮರೆಯಲಾಗದ ಹಾಡುಗಳನ್ನು ಹಂಚಿಕೊಂಡ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣೆಯಲ್ಲಿ ಮರೆಯಲಾಗದ ಹಾಡುಗಳನ್ನು ಹಂಚಿಕೊಂಡ ಅಭಿಮಾನಿಗಳು

SP Balasubramanyam's Voice is Time Machine: Fans Share Favourite Songs After Singer's Demise

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮರಣೆಯಲ್ಲಿ ಅಭಿಮಾನಿಗಳು ಎಸ್ ಪಿ ಬಿ ಹಾಡುಗಳನ್ನು ಜಾಲತಾಣದಲ್ಲಿ ಹಂಚಿಕೊಂಡು ಕಂಬಿನಿ ಮಿಡಿದಿದ್ದಾರೆ.

ದೇಶದ ಲಕ್ಷಾಂತರ ಅಭಿಮಾನಿಗಳು ಎಸ್ ಪಿ ಬಿ ಹಾಡು, ಅವರು ಹಾಡಿದ ಚಿತ್ರಗಳ ತುಣುಕು, ಅಭಿನಯದ ಚಿತ್ರ ಹೀಗೆ ಅವರಿಗೆ ಸಂತಾಪ ವ್ಯಕ್ತಪಡಿಸುವ ಅನೇಕ ವಿಡಿಯೋಗಳು ಹರಿದಾಡುತ್ತಿವೆ. ಅವರಿಲ್ಲದಿದ್ದರೂ ಅವರ ಸುಮಧುರ ಗಾಯನ ಎಲ್ಲೆಡೆ ಕಿವಿಗೆ ಇಂಪು ನೀಡುತ್ತಿದೆ.

ಐದು ದಶಕಗಳ ಅವರ ನಿರಂತರ ಸಂಗೀತ ಸೇವೆಯಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದರಾಗಿ, ನಟರಾಗಿ ಹಲವು ಭಾಷೆಗಳಲ್ಲಿ ಅಭಿನಯಿಸಿ ಕೊಡುಗೆ ನೀಡಿದ್ದಾರೆ‌.

ಅವರ ಸೇವೆಗೆ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ. ಹಲವು ಮೆಗಾಹಿಟ್ ಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...