alex Certify ನಟಿ ಕಾಜಲ್​ ಅಗರ್ವಾಲ್​ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕಾಜಲ್​ ಅಗರ್ವಾಲ್​ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ

ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್​ ಕೆಲ ತಿಂಗಳ ಹಿಂದಷ್ಟೇ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ, ಹನಿಮೂನ್​ ಮುಗಿಸಿ ಇದೀಗ ಮತ್ತೆ ಶೂಟಿಂಗ್​​ನಲ್ಲಿ ಬ್ಯುಸಿ ಆಗಿರುವ ನಟಿ ಸೋಮವಾರ ಇನ್​ಸ್ಟಾಗ್ರಾಂನಲ್ಲಿ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.

ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಕಾಜಲ್​ ಬಾಲ್ಯದಿಂದಲೂ ತಾವು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರೋದಾಗಿ ನಟಿ ಹೇಳಿಕೊಂಡಿದ್ದಾರೆ. ಎಲ್ಲಿಯಾದರೂ ಪ್ರಯಾಣಿಸುವ ವೇಳೆ ಅಥವಾ ಧೂಳಿನ ಸಮಸ್ಯೆ ಇದ್ದಲ್ಲಿ ನನಗೆ ಈ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ನಾನು ಇನ್​​ಹೇಲರ್​ಗಳನ್ನ ಬಳಕೆ ಮಾಡುತ್ತೇನೆ ಎಂದು ಅನುಭವ ಹಂಚಿಕೊಂಡಿದ್ದರು.

ಕಾಜಲ್​ ಅಗರ್​ವಾಲ್​ ಅನುಭವಿಸುತ್ತಿರುವ ಈ ಸಮಸ್ಯೆಯನ್ನ ಶ್ವಾಸನಾಳದ ಅಸ್ತಮಾ ಎಂದು ಕರೆಯಲಾಗುತ್ತೆ. ಈ ಸಮಸ್ಯೆ ಇರುವವರು ಎದೆಯಲ್ಲಿ ಒತ್ತಡ, ಉಸಿರಾಟದ ಸಮಸ್ಯೆ, ಕಫ, ಸೀನಿನ ಸಮಸ್ಯೆಯಿಂದ ಬಳಲುತಿರ್ತಾರೆ.

ಧೂಳಿನ ಅಲರ್ಜಿ ಸಮಸ್ಯೆ ಇರುವವರು ಅಥವಾ ಧೂಳಿನಿಂದಾಗಿ ಕೂಡಲೇ ಕಫದ ಸಮಸ್ಯೆ ಎದುರಿಸುವವರು ಆದಷ್ಟು ಬೇಗ ವೈದ್ಯರಲ್ಲಿ ಅಸ್ತಮಾ ಬಗ್ಗೆ ಚರ್ಚೆ ನಡೆಸೋದು ಒಳಿತು. ಈ ವೇಳೆ ನಿಮ್ಮ ಎದೆಯ ಎಕ್ಸ್​ ರೇಯನ್ನ ತೆಗೆದು ನೀವು ಅಸ್ತಮಾದಿಂದ ಬಳಲುತ್ತಿದ್ದಿರೋ ಇಲ್ಲವೋ ಅನ್ನೋದ್ರ ಬಗ್ಗೆ ವೈದ್ಯರು ಮಾಹಿತಿ ನೀಡ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...