ದೇಶಾದ್ಯಂತ ಕೋವಿಡ್ ವ್ಯಾಪಕವಾಗುತ್ತಿರುವಂತೆ ಸೋಂಕಿಗೆ ಸಂಬಂಧಪಟ್ಟ ಲಸಿಕೆಯ ಕಳ್ಳತನಗಳು ವಿವಿಧ ಕಡೆ ನಡೆದಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯ ಪಿಪಿಸಿ ಕೇಂದ್ರದಿಂದ ಕೋವಿಡ್ -19 ಲಸಿಕೆ ಕಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಅಚ್ಚರಿ ಎಂಬಂತೆ ಕಾಣೆಯಾದ ಔಷಧಿಯನ್ನು ಕಳ್ಳ ಭಾಗಶಃ ಹಿಂದಿರುಗಿಸಿದ್ದಾನೆ.
ಜಿಂದ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಮೀಪದ ಚಹಾ ಅಂಗಡಿ ಬಳಿ 182 ವೇಲ್ಸ್ ಕೋವಿಶೀಲ್ಡ್, 440 ಕೋವಾಕ್ಸಿನ್ ವೇಲ್ಸ್ ಪತ್ತೆಯಾಗಿದ್ದು, ಜತೆಗೆ ಕ್ಷಮಾಪಣೆ ಪತ್ರವೂ ಅಲ್ಲಿತ್ತು. ಕ್ಷಮಿಸಿ, ಇದು ಕೋವಿಡ್ ಲಸಿಕೆ ಎಂದು ನನಗೆ ತಿಳಿದಿರಲಿಲ್ಲ ಎಂದು ಕದ್ದ ಕಳ್ಳನು ಕ್ಷಮಾಪಣೆ ಕೋರಿದ್ದ.
ಕೋವಿಡ್ ಆಸ್ಪತ್ರೆ ICU ಗೆ ಬೆಂಕಿ, 12 ಸೋಂಕಿತರು ಸಾವು
ಆಸ್ಪತ್ರೆಯ ಫ್ರೀಜರ್ನಿಂದ 1270 ಡೋಸ್ ಕೋವಿಶೀಲ್ಡ್ ಮತ್ತು 440 ಶಾಟ್ ಕೋವಾಕ್ಸಿನ್ ಕಳವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಉಳಿದವು ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ.
ಅದೇ ಫ್ರೀಜರ್ನಲ್ಲಿ ಸಂಗ್ರಹವಾಗಿರುವ ಇತರ ಲಸಿಕೆಗಳನ್ನು ಕಳ್ಳ ಮುಟ್ಟಲಿಲ್ಲ ಮತ್ತು ಅಲ್ಲೇ ಇದ್ದ ಲ್ಯಾಪ್ಟಾಪ್ ಮತ್ತು ಇತರ 50 ಸಾವಿರ ರೂ. ನಗದು ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಸಹ ಮುಟ್ಟಿಲ್ಲ.
ಲಸಿಕೆ ವಾಪಸ್ ಮಾಡಿದ್ದರೂ ಅವು ಬಳಕೆಗೆ ಬರುವುದಿಲ್ಲ. ಲಸಿಕೆ ಬಾಟಲುಗಳನ್ನು ಫ್ರೀಜರ್ನಲ್ಲೇ ಸಂಗ್ರಹಿಸಬೇಕಾಗಿರುವುದರಿಂದ ಅವುಗಳು ಈಗ ನಿಷ್ಪ್ರಯೋಜಕವಾಗಿವೆ.