ಹೈದ್ರಾಬಾದ್: ಜನರಿಗೆ ನೆರವಾಗಿ ನಿಜವಾದ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಹೆಸರಿನಲ್ಲಿ ಮಂದಿರ ನಿರ್ಮಾಣವಾಗಿದೆ. ಈ ಮೂಲಕ ಜನ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ತೆಲಂಗಾಣ ರಾಜ್ಯದ ಸಿದ್ದಿಪೇಟ್ ಜಿಲ್ಲೆಯ ಡುಬ್ಬಾ ತಾಂಡ ಗ್ರಾಮದಲ್ಲಿ 47 ವರ್ಷದ ಸೋನು ಸೂದ್ ಮೂರ್ತಿ ಹಾಗೂ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಭಾನುವಾರ ದೇವಸ್ಥಾನ ಉದ್ಘಾಟಿಸಲಾಯಿತು. ಗ್ರಾಮದ ಮಹಿಳೆಯರು ಸಾಂಪ್ರದಾಯಿಕ ಉಡುಗೆ ಉಟ್ಟು ಪೂರ್ಣ ಕುಂಭ ಸ್ವಾಗತ ಮಾಡಿದರು. ಸೂದ್ ಅವರಿದ್ದ ಚಿತ್ರದ ಒಂದು ಹಾಡನ್ನು ಕಾರ್ಯಕ್ರಮದಲ್ಲಿ ಹಾಡಲಾಯಿತು.
“ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸೋನು ಸಾವಿರಾರು ಜನರಿಗೆ ನೆರವಾಗಿದ್ದಾರೆ. ಇದರಿಂದ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಲಾಗಿದೆ” ಎಂದು ಸ್ಥಳೀಯ ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಲ ರೆಡ್ಡಿ ಹೇಳಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಸೋನು ಸೂದ್, “ನಾನು ಇದಕ್ಕೆ ಅರ್ಹನಲ್ಲ” ಎಂದಿದ್ದಾರೆ.