alex Certify ʼಕೊರೊನಾʼ ಸೋಂಕಿಗೊಳಗಾಗಿದ್ದ ಸಂದರ್ಭದಲ್ಲೂ ಸೋನು ಸೂದ್‌ ಮಹತ್ವದ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕಿಗೊಳಗಾಗಿದ್ದ ಸಂದರ್ಭದಲ್ಲೂ ಸೋನು ಸೂದ್‌ ಮಹತ್ವದ ಕಾರ್ಯ

ಕಳೆದ ವರ್ಷ ಕೊರೊನಾ ವೈರಸ್​ ಬಂದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​​ ದೇಶದ ಜನತೆಗೆ ಸಹಾಯ ಮಾಡುವ ಮೂಲಕ ಭಾರೀ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ಊರು ತಲುಪಲು ಸಹಾಯ ಮಾಡಿದ್ದರಿಂದ ಹಿಡಿದು ಇದೀಗ ಸೋಂಕಿತರಿಗೆ ಹಾಸಿಗೆ ಹಾಗೂ ಆಮ್ಲಜನಕದ ವ್ಯವಸ್ಥೆ ಮಾಡುವಲ್ಲಿಯವರೆಗೂ ಸೋನು ಸೂದ್​ರ ಸಮಾಜಸೇವೆ ಮುಂದುವರಿದಿದೆ.

ಇದೀಗ ನಟ ಸೋನು ಸೂದ್​​ ಗಂಭೀರ ಸ್ಥಿತಿಯಲ್ಲಿದ್ದ 25 ವರ್ಷದ ಯುವತಿ ಭಾರತಿ ಎಂಬವರನ್ನ ಹೆಚ್ಚಿನ ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದರಾಬಾದ್​ಗೆ ವಿಮಾನದ ಮೂಲಕ ಶಿಫ್ಟ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕೊರೊನಾದಿಂದ ಗಂಭೀರ ಸ್ಥಿತಿ ತಲುಪಿದ್ದ ಭಾರತಿಗೆ ಇಸಿಎಂಓ ಚಿಕಿತ್ಸೆಯ ಅವಶ್ಯಕತೆ ಇತ್ತು. ವೈದ್ಯರ ಜೊತೆ ಸಂಪರ್ಕದಲ್ಲಿದ್ದ ಸೋನು ಸೂದ್​​ ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ಹೈದಾರಾಬಾದ್​ಗೆ ಕಳುಹಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರಿಯಲ್​ ಲೈಫ್​ ಹಿರೋ ಸೋನು ಸೂದ್​, ವೈದ್ಯರು 20 ಪ್ರತಿಶತ ಮಾತ್ರ ಗ್ಯಾರಂಟಿ ನೀಡಿದ್ದರು. ಆದರೂ ನನಗೆ ಸುಮ್ಮನೇ ಇರಲು ಮನಸ್ಸು ಒಪ್ಪಲಿಲ್ಲ. ಆಕೆ 25 ವರ್ಷದ ಯುವತಿ ಹಾಗೂ ಆಕೆ ಕೋವಿಡ್​ನ್ನು ಜಯಿಸುತ್ತಾಳೆ ಎಂಬ ನಂಬಿಕೆ ನನಗಿದೆ. ಈಗ ಆಕೆಗೆ ಹೈದಾರಾಬಾದ್​ನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಬೇಗ ಆಸ್ಪತ್ರೆಯಿಂದ ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುವೆ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...